ರಾಹುಲ್‌ ಹಿಡಿದಿರುವುದು ಚೀನಾ ಸಂವಿಧಾನ ಪುಸ್ತಕ : ಹಿಮಂತ

| Published : May 19 2024, 01:57 AM IST / Updated: May 19 2024, 04:57 AM IST

ರಾಹುಲ್‌ ಹಿಡಿದಿರುವುದು ಚೀನಾ ಸಂವಿಧಾನ ಪುಸ್ತಕ : ಹಿಮಂತ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣೆ ಪ್ರಚಾರದ ವೇಳೆ ಪ್ರದರ್ಶಿಸುತ್ತಿರುವ ಸಂವಿಧಾನ ಪುಸ್ತಕ ಚೀನಾದ್ದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ.

ಗುವಾಹಟಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಚುನಾವಣೆ ಪ್ರಚಾರದ ವೇಳೆ ಪ್ರದರ್ಶಿಸುತ್ತಿರುವ ಸಂವಿಧಾನ ಪುಸ್ತಕ ಚೀನಾದ್ದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಆರೋಪಿಸಿದ್ದಾರೆ. 

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಹಿಮಂತ, ‘ಭಾರತದ ಸಂವಿಧಾನದ ಪುಸ್ತಕ ನೀಲಿ ಬಣ್ಣದಲ್ಲಿ ಇರುತ್ತದೆ. ಆದರೆ ರಾಹುಲ್‌ ಹಿಡಿದ ಸಂವಿಧಾನ ಕೆಂಪು ಬಣ್ಣದಲ್ಲಿದೆ. 

ಇದು ಚೀನಾ ದೇಶದ್ದು’ ಎಂದು ಬರೆದಿದ್ದಾರೆ. ಇದಕ್ಕೆ ಕೆಲ ನೆಟ್ಟಿಗರು ಕಮೆಂಟ್‌ ಬರೆದಿದ್ದು, ದೇಶದ ಉನ್ನತ ನಾಯಕರಿಗೆ ಈ ರೀತಿಯ ಪಾಕೆಟ್‌ ಸಂವಿಧಾನವನ್ನು ನೀಡಲಾಗುತ್ತದೆ. ಅದರ ಬಣ್ಣ ಕೆಂಪು ಬಣ್ಣದಲ್ಲಿಯೇ ಇರುತ್ತದೆ ಎಂದಿದ್ದಾರೆ.