ಇವಿಎಂ ಪಾರದರ್ಶಕತೆ ಖಚಿತಪಡಿಸಿ ಇಲ್ಲವೇ ರದ್ದುಗೊಳಿಸಿ: ರಾಹುಲ್

| Published : Jun 18 2024, 01:30 AM IST / Updated: Jun 18 2024, 05:08 AM IST

ಇವಿಎಂ ಪಾರದರ್ಶಕತೆ ಖಚಿತಪಡಿಸಿ ಇಲ್ಲವೇ ರದ್ದುಗೊಳಿಸಿ: ರಾಹುಲ್
Share this Article
  • FB
  • TW
  • Linkdin
  • Email

ಸಾರಾಂಶ

ಇವಿಎಂ ಪಾರದರ್ಶಕತೆ ಖಚಿತಪಡಿಸಿ ಇಲ್ಲವೇ ರದ್ದುಗೊಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂದಿ ಆಗ್ರಹಿಸಿದ್ದಾರೆ.

ನವದೆಹಲಿ: ವಿದ್ಯುನ್ಮಾನ ಮತ ಯಂತ್ರ ( ಇವಿಎಂ) ಪಾರದರ್ಶಕತೆ ಬಗ್ಗೆ ಸೋಮವಾರವೂ ಪ್ರಶ್ನೆ ಎತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಇವಿಎಂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ಪಾರದರ್ಶಕತೆಯನ್ನು ಖಚಿತ ಪಡಿಸಿ. ಇಲ್ಲವೇ ಇವಿಎಂ ರದ್ದುಗೊಳಿಸುವಂತೆ ಸೋಮವಾರ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

‘ಇವಿಎಂ ಎನ್ನುವುದು ಒಂದು ಕಪ್ಪು ಪೆಟ್ಟಿಗೆ. ಆದರೆ ಯಾರಿಗೂ ಅದನ್ನು ಪರಿಶೀಲಿಸಲು ಸಾಧ್ಯವಿಲ್ಲ’ ಎಂದು ದೇಶದ ಚುನಾವಣಾ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಈ ರೀತಿಯ ಬೇಡಿಕೆಯನ್ನಿಟ್ಟಿದ್ದಾರೆ. ‘ಯಾವಾಗ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತೆವೆಯೋ, ಆಗ ಸಾರ್ವಜನಿಕರಿಗೆ ಪಾರದರ್ಶಕವಾಗಿರುವ ಚುನಾವಣೆಗಳಲ್ಲಿ ರಕ್ಷಣೆ ಇರುತ್ತದೆ. ಇವಿಎಂ ಸದ್ಯ ಕಪ್ಪು ಪೆಟ್ಟಿಗೆಯಲ್ಲಿದೆ. ಚುನಾವಣಾ ಆಯೋಗ ಒಂದೋ ಈ ಮತಯಂತ್ರ ಮತ್ತು ಅದರ ವಿಧಾನದ ಬಗ್ಗೆ ಪಾರದರ್ಶಕತೆ ಖಚಿತಪಡಿಸಬೇಕು. ಇಲ್ಲವೋ ಅದನ್ನು ರದ್ದುಗೊಳಿಸಬೇಕು’ ಎಂದು ಎಕ್ಸ್‌ನಲ್ಲಿ ರಾಹುಲ್‌ ಪೋಸ್ಟ್‌ ಮಾಡಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ನಾಯಕ ಗೌರವ್ ಗೊಗಯ್ ಇವಿಎಂ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದು,‘ಎವಿಎಂಗಳನ್ನು ದೋಷಪೂರಿತವೆಂದು ಪರಿಗಣಿಸುವ ಮೊದಲು, ಚುನಾವಣೆಯಲ್ಲಿ ಎಷ್ಟು ದೋಷಪೂರಿತ ಮತ ಯಂತ್ರಗಳು ಬಳಕೆಯಾಗಿವೆ ಎನ್ನುವುದನ್ನು ಬಹಿರಂಗ ಪಡಿಸಬೇಕು. ಚುನಾವಣೆ ಫಲಿತಾಂಶದಲ್ಲಿ ಮತಯಂತ್ರಗಳು ತಪ್ಪಾದ ಫಲಿತಾಂಶವನ್ನು ತೋರಿಸಿವೆ ಎಂದು ಹೇಳಬಲ್ಲೆ. ಆಯೋಗ ಈ ಬಗ್ಗೆ ಅಂಕಿ ಅಂಶ ಬಹಿರಂಗ ಪಡಿಸಲಿ, ಸಾರ್ವಜನಿಕರಿಗೂ ತಿಳಿದುಕೊಳ್ಳುವ ಹಕ್ಕಿದೆ’ ಎಂದಿದ್ದಾರೆ.