ಚುನಾವಣೆಯಲ್ಲಿ ಸೋತರೆ ರಾಹುಲ್‌ ಹಿಂದೆ ಸರಿಯಲಿ: ಪ್ರಶಾಂತ್‌ ಕಿಶೋರ್‌

| Published : Apr 08 2024, 01:04 AM IST / Updated: Apr 08 2024, 05:49 AM IST

ಚುನಾವಣೆಯಲ್ಲಿ ಸೋತರೆ ರಾಹುಲ್‌ ಹಿಂದೆ ಸರಿಯಲಿ: ಪ್ರಶಾಂತ್‌ ಕಿಶೋರ್‌
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲು ಕಂಡರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಯಕತ್ವದಿಂದ ಹಿಂದಕ್ಕೆ ಸರಿಯಬೇಕು ಎಂದು ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಆಗ್ರಹಿಸಿದ್ದಾರೆ.

ನವದೆಹಲಿ: ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋಲು ಕಂಡರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಯಕತ್ವದಿಂದ ಹಿಂದಕ್ಕೆ ಸರಿಯಬೇಕು ಎಂದು ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌ ಆಗ್ರಹಿಸಿದ್ದಾರೆ.

ಪಿಟಿಐನ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತಾನಾಡಿದ ಅವರು, ಈ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಿದ ಕಾರ್ಯಗಳಿಂದ ಯಶ ಕಾಣದಿದ್ದರೆ ಪಕ್ಷದ ಮತ್ತು ನಾಯಕರ ಅಸಮರ್ಥತೆಯನ್ನು ಸೂಚಿಸುತ್ತದೆ. ಆದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲದಿದ್ದರೆ ರಾಹುಲ್‌ ಗಾಂಧಿ ಅವರು ತಮ್ಮ ನಾಯಕತ್ವ ಸ್ಥಾನದಿಂದ ಸರಿಯಬೇಕು ಎಂದರು.

ಇದರಿಂದ ಬೇರೆಯವರಿಗೆ ಅವಕಾಶ ನೀಡಿದಂತಾಗುತ್ತದೆ. 1991ರಲ್ಲಿ ರಾಜೀವ್‌ ಗಾಂಧಿ ಅವರ ಮರಣದ ನಂತರ ಸೋನಿಯಾ ಗಾಂಧಿ ಅವರು ತಮ್ಮ ನಾಯಕತ್ವವನ್ನು ಪಿ.ವಿ. ನರಸಿಂಹರಾವ್‌ ಅವರಿಗೆ ವಹಿಸಿದ್ದರು. ಇದರಂತೆ ರಾಹುಲ್‌ ಗಾಂಧಿ ಕೂಡ ನಾಯಕತ್ವವನ್ನು ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಸಲಹೆ ನೀಡಿದರು.