ಸಾರಾಂಶ
ಹಬ್ಬದ ವೇಳೆ ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ, ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ಶೇ.20ರಷ್ಟು ರಿಯಾಯ್ತಿ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ನವದೆಹಲಿ: ಹಬ್ಬದ ವೇಳೆ ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ, ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ಶೇ.20ರಷ್ಟು ರಿಯಾಯ್ತಿ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ಆ.14ರಿಂದ ಈ ಯೋಜನೆ ಆರಂಭವಾಗಲಿದ್ದು, ಮೊದಲ ಯಾನದ ಪ್ರಯಾಣ ದಿನಾಂಕವು ಅ.13ರಿಂದ ಅ.26ರವರೆಗೆ ಇರಬೇಕಿದೆ. ರಿಟರ್ನ್ ಬರುವ ದಿನಾಂಕವು ನ.17ರಿಂದ ಡಿ.1ರ ಒಳಗೆ ಇರಬೇಕಿದೆ. ಈ ಅವಧಿಯಲ್ಲಿ ಟಿಕೆಟ್ ಬುಕ್ ಮಾಡಿಕೊಂಡವರಿಗೆ ರಿಯಾಯ್ತಿ ಲಭಿಸಲಿದೆ. ಇವುಗಳು ವಂದೇ ಭಾರತ್, ಶತಾಬ್ಧಿ, ರಾಜಧಾನಿ, ದುರಂತೋ ರೀತಿ ಪ್ರೀಮಿಯಂ ರೈಲುಗಳಿಗೆ ಅನ್ವಯಿಸುವುದಿಲ್ಲ. ಎಲ್ಲಾ ಸಾಮಾನ್ಯ ಎಕ್ಸ್‌ಪ್ರೆಸ್, ಸುಪರ್‌ಫಾಸ್ಟ್‌ಗಳಿಗೆ ಅನ್ವಯಿಸಲಿದೆ. ಇದರಲ್ಲಿ ಯಾವುದೇ ರೀಫಂಡ್ ದೊರೆಯುವುದಿಲ್ಲ ಎಂದು ರೈಲ್ವೆ ತಿಳಿಸಿದೆ.