ಕಲ್ಯಾಣ್‌- ಡೊಂಬಿವಿಲಿ ಮುನ್ಸಿಪಲ್‌ ಚುನಾವಣೆ ವೇಳೆ ಬಿಜೆಪಿ- ಶಿವಸೇನೆ (ಶಿಂಧೆ) ಅಭ್ಯರ್ಥಿಗಳ ವಿರುದ್ಧ ಸೋಲು ಕಂಡಿದ್ದ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ, ಅದೇ ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಗೆ ಟಾಂಗ್‌ ನೀಡಲು ಶಿವಸೇನೆ ಬೆಂಬಲಿಸಲು ಮುಂದಾಗಿದೆ.

ಕಲ್ಯಾಣ್‌-ಡೊಂಬಿವಿಲಿ ಪಾಲಿಕೆಯಲ್ಲಿ ಅಚ್ಚರಿಯ ನಡೆ

ಥಾಣೆ: ಕಲ್ಯಾಣ್‌- ಡೊಂಬಿವಿಲಿ ಮುನ್ಸಿಪಲ್‌ ಚುನಾವಣೆ ವೇಳೆ ಬಿಜೆಪಿ- ಶಿವಸೇನೆ (ಶಿಂಧೆ) ಅಭ್ಯರ್ಥಿಗಳ ವಿರುದ್ಧ ಸೋಲು ಕಂಡಿದ್ದ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ, ಅದೇ ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಗೆ ಟಾಂಗ್‌ ನೀಡಲು ಶಿವಸೇನೆ ಬೆಂಬಲಿಸಲು ಮುಂದಾಗಿದೆ. 122 ಸದಸ್ಯ ಬಲದ ಪಾಲಿಕೆಯಲ್ಲಿ ಶಿವಸೇನೆ 53, ಬಿಜೆಪಿ 50, ಶಿವಸೇನೆ (ಠಾಕ್ರೆ ಬಣ) 11, ಎಂಎನ್‌ಎಸ್‌ 5, ಕಾಂಗ್ರೆಸ್‌ ಮತ್ತು ಎನ್‌ಸಿಪಿ ತಲಾ ಒಂದು ಸ್ಥಾನ ಗಳಿಸಿವೆ. ಇದರ ಬೆನ್ನಲ್ಲೇ ಶಿವಸೇನೆಯ ಐವರು ವಿಜೇತ ಅಭ್ಯರ್ಥಿಗಳು ಮೇಯರ್‌ ಸ್ಥಾನಕ್ಕೆ ಶಿಂಧೆ ಬಣಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಅವಕಾಶ ನಿರಾಕರಿಸುವ ಮತ್ತು ಬಿಜೆಪಿ- ಶಿವಸೇನೆ ದೂರ ಮಾಡುವ ತಂತ್ರವನ್ನು ಎಂಎನ್‌ಎಸ್‌ ಹೆಣೆದಿದೆ ಎನ್ನಲಾಗಿದೆ.