ಕೇರಳದ ರಾಜಕೀಯ ಸಂಸ್ಕೃತಿಯೇ ವಿಚಿತ್ರ. ಜನಸಾಮಾನ್ಯರ ಕಷ್ಟಗಳಿಗೆ ಬದಲಾಗಿ, ಇಲ್ಲಿನ ರಾಜಕೀಯ ಪಕ್ಷಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತವೆ. ನಾನು ಸಂಸತ್ತಿನಲ್ಲಿ 18 ವರ್ಷ ಇದ್ದು ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ. ಆದರೆ ನಾನು ಏನನ್ನೂ ನೋಡಿಲ್ಲ ಎಂದು ಈಗ ಅರಿವಾಯಿತು ಎಂದು ಕೇರಳ ಬಿಜೆಪಿ ಅಧ್ಯಕ್ಷ, ಶಾಸಕ ರಾಜೀವ್ ಚಂದ್ರಶೇಖರ್ ಭಾನುವಾರ ಹೇಳಿದ್ದಾರೆ.
-18 ವರ್ಷ ಸಂಸತ್ತಲ್ಲಿ ಎಲ್ಲ ತಿಳಿದಿದ್ದೇನೆ ಅಂದ್ಕೊಂಡಿದ್ದೆ
- ಆದರೆ ನಾನು ಏನೂ ನೋಡಿಲ್ಲ ಎಂದು ಈಗ ಎನ್ನಿಸ್ತಿದೆತಿರುವನಂತಪುರಂ: ಕೇರಳದ ರಾಜಕೀಯ ಸಂಸ್ಕೃತಿಯೇ ವಿಚಿತ್ರ. ಜನಸಾಮಾನ್ಯರ ಕಷ್ಟಗಳಿಗೆ ಬದಲಾಗಿ, ಇಲ್ಲಿನ ರಾಜಕೀಯ ಪಕ್ಷಗಳು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತವೆ. ನಾನು ಸಂಸತ್ತಿನಲ್ಲಿ 18 ವರ್ಷ ಇದ್ದು ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ. ಆದರೆ ನಾನು ಏನನ್ನೂ ನೋಡಿಲ್ಲ ಎಂದು ಈಗ ಅರಿವಾಯಿತು ಎಂದು ಕೇರಳ ಬಿಜೆಪಿ ಅಧ್ಯಕ್ಷ, ಶಾಸಕ ರಾಜೀವ್ ಚಂದ್ರಶೇಖರ್ ಭಾನುವಾರ ಹೇಳಿದ್ದಾರೆ.ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಜೂ.1ರಂದು ಮೊದಲ ಬಾರಿ ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದೆ. ನಾನು ಸಂಸತ್ತಿನಲ್ಲಿ 18 ವರ್ಷಗಳ ಕಾಲ ರಾಜಕೀಯ ಮತ್ತು ಸಂಸದೀಯ ಕಾರ್ಯಚಟುವಟಿಕೆಗಳಲ್ಲಿ ಬಹುತೇಕ ಎಲ್ಲವನ್ನೂ ನೋಡಿದ್ದೇನೆ ಎಂದು ಭಾವಿಸಿದ್ದೆ. ಆದರೆ ಈಗ ನಾನು ಏನನ್ನೂ ನೋಡಿಲ್ಲ ಎಂದು ಅರಿವಾಯಿತು. ಇತ್ತೀಚಿನ ವಿಧಾನಸಭಾ ಅಧಿವೇಶನವು ಹಲವಾರು ಕಾರಣಗಳಿಂದ ಗಮನಾರ್ಹವಾಗಿತ್ತು. ಅದರಲ್ಲಿ ಎದ್ದು ಕಂಡ ಅಂಶವೆಂದರೆ, ಸಮಾಜದ ನಿಜವಾದ ಕಾಳಜಿಗಳಿಂದ ಸಂಪರ್ಕ ಕಡಿತಗೊಂಡ ರಾಜಕೀಯ ಸಂಸ್ಕೃತಿ’ ಎಂದು ಬರೆದುಕೊಂಡಿದ್ದಾರೆ.‘ನನಗೆ ವಿಚಿತ್ರವೆನಿಸಿದ್ದು ಕೆಲವು ಜನರ ರಾಜಕೀಯ. ಇದು ಸಮಾಜ ಎದುರಿಸುತ್ತಿರುವ ನೈಜ ಸಮಸ್ಯೆಗಳೊಂದಿಗೆ ಯಾವುದೇ ಸಂಬಂಧವಿಲ್ಲದ ವಿಚಿತ್ರ ರೀತಿಯ ರಾಜಕೀಯ. ರಾಜಕೀಯ ನಾಯಕರು ಅಭಿವೃದ್ಧಿ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯ ಚರ್ಚೆಗಳಿಗಿಂತ ಸೈದ್ಧಾಂತಿಕ ಚರ್ಚೆಗಳು ಮತ್ತು ರಾಜಕೀಯ ವಿವಾದಗಳಲ್ಲಿ ಮುಳುಗಿದ್ದಾರೆ. ಇಲ್ಲಿನ ಪರಿಸ್ಥಿತಿ ಸಂಕಟ, ಕರುಣಾಜನಕ ಮತ್ತು ಸಂಪೂರ್ಣವಾಗಿ ಬೇಜವಾಬ್ದಾರಿಯುತವಾಗಿದೆ’ ಎಂದು ವಿವರಿಸಿದ್ದಾರೆ.