ಸಾರಾಂಶ
ಚೆನ್ನೈ: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಸದ್ಯದಲ್ಲಿಯೇ ಸಿನಿರಂಗಕ್ಕೆ ವಿದಾಯ ಹೇಳಲಿದ್ದಾರೆ. ಇದಕ್ಕೆ ಅವರ ಕುಟುಂಬಸ್ಥರೂ ಸಮ್ಮತಿ ಸೂಚಿಸಿದ್ದಾರೆ ಎನ್ನುವ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ.ಕನ್ನಡದ ಮೂಲಕ ಚಿತ್ರರಂಗ ಪ್ರವೇಶಿಸಿ ಕಳೆದ 5 ದಶಕಗಳ ಅವಧಿಯಲ್ಲಿ 6 ಭಾಷೆಗಳಲ್ಲಿ 170 ಚಿತ್ರಗಳಲ್ಲಿ ನಟಿಸಿರುವ ರಜನಿ ಅವರಿಗೀಗ 74 ವರ್ಷ.
ದೇಹ ಸಹಕರಿಸುತ್ತಿಲ್ಲ
ಅಭಿಮಾನಿಗಳ ಬಯಸುವ ರೀತಿಯಲ್ಲಿ ಪಾತ್ರ ಮಾಡುವುದಕ್ಕೆ ದೇಹ ಸಹಕರಿಸುತ್ತಿಲ್ಲ. ಹೀಗಾಗಿ ಕಮಲ್ ಹಾಸನ್ ಜತೆಗೆ ನಟಿಸಲು ಈಗಾಗಲೇ ಸಹಿ ಹಾಕಿರುವ ಒಂದು ಚಿತ್ರ ಸೇರಿದಂತೆ ಒಟ್ಟು ಮೂರು ಚಿತ್ರಗಳಲ್ಲಿ ನಟಿಸಿದ ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿವೆ. ರಜನೀಕಾಂತ್ ಅವರು ಜೈಲರ್ -2 ಹಾಗೂ ಸುಂದರ್ ಸಿ ಅವರ ನಿರ್ದೇಶನ ಸಿನಿಮಾದಲ್ಲಿ ನಟಿಸುವ ಬಗ್ಗೆ ನಿರ್ಧಾರ ಹೊರಬಿದ್ದಿದೆ. ಆದರೆ ವಿದಾಯದ ಕುರಿತು ರಜನೀಕಾಂತ್ ಸೇರಿದಂತೆ ಯಾರೂ ಕೂಡ ಸ್ಪಷ್ಟನೆ ನೀಡಿಲ್ಲ.
ರಜನಿಕಾಂತ್ ಪೋಯೆಸ್ ಗಾರ್ಡನ್ ನಿವಾಸಕ್ಕೆ ದಿಢೀರನೇ ನುಗ್ಗಿದ ತಮಿಳುನಾಡು ಪೊಲೀಸ್
ಚೆನ್ನೈ : ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಟ ರಜನಿಕಾಂತ್ ಮತ್ತು ನಟ ಧನುಷ್ ಅವರ ಮನೆಗಳಿಗೆ ಸೋಮವಾರ ಪೊಲೀಸರು ಇದ್ದಕ್ಕಿದ್ದಂತೆ ಆಗಮಿಸಿದರು. ಅವರೊಂದಿಗೆ ಬಾಂಬ್ ಸ್ಕ್ವಾಡ್ ಕೂಡ ಆಗಮಿಸಿತು. ರಜನಿಕಾಂತ್ ಅವರ ಮನೆಗೆ ಪೊಲೀಸರ ಹಠಾತ್ ಆಗಮನ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ಅಷ್ಟಕ್ಕೂ ಡಿಢೀರ್ ಆಗಿ ಪೊಲೀಸರು ಬರಲು ಕಾರಣವೇನು ಅಂತಾ ಅಭಿಮಾನಿಗಳು ಕುತೂಹಲದ ಕಣ್ಣಿನಿಂದ ನೋಡಿದ್ದಾರೆ.ರಜನಿಕಾಂತ್ ಜೊತೆಗೆ, ಪೊಲೀಸರು ಅವರ ಮಗಳ ಮಾಜಿ ಪತಿ ನಟ ಧನುಷ್ ಅವರ ಮನೆಯನ್ನು ಸಹ ತಲುಪಿದ್ದರು. ನಿಜಕ್ಕೂ ಅಲ್ಲಿ ಆಗಿದ್ದೇನು ಅನ್ನೋದರ ವಿವರ ಇಲ್ಲಿದೆ.
ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್ ಮತ್ತು ಧನುಷ್‌ಗೆ ಬೆದರಿಕೆಗಳು ಬಂದಿದ್ದವು. ತಮಿಳುನಾಡಿನ ಡಿಜಿಪಿಗೆ ಸೂಪರ್‌ಸ್ಟಾರ್‌ಗಳ ಮನೆಗಳನ್ನು ಬಾಂಬ್‌ಗಳಿಂದ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ ಬಂದಿತ್ತು. ಅದರ ನಂತರ, ಪೊಲೀಸರು ಸೂಪರ್‌ಸ್ಟಾರ್‌ಗಳ ಭದ್ರತೆಯನ್ನು ಹೆಚ್ಚಿಸಿ ಈ ಬಗ್ಗೆ ತನಿಖೆ ನಡೆಸಿದರು. ಈ ಬೆದರಿಕೆಗಳು ನಕಲಿ ಎಂದು ವರದಿಯೊಂದು ತಿಳಿಸಿದೆ. ದಿ ಹಿಂದೂ ವರದಿಯ ಪ್ರಕಾರ, ಕೆಲವು ಅಪರಿಚಿತ ವ್ಯಕ್ತಿಗಳು ಡಿಜಿಪಿಗೆ ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. ಧನುಷ್ ಮತ್ತು ರಜನಿಕಾಂತ್ ಅವರ ಮನೆಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಮೇಲ್ ನಂತರ, ಪೊಲೀಶರು ತಕ್ಷಣವೇ ಇವರ ಮನೆಗಳಿಗೆ ನುಗ್ಗಿ ಪರಿಶೀಲನೆ ಮಾಡಿ ಭದ್ರತೆ ಖಚಿತಪಡಿಸಿದ್ದಾರೆ

;Resize=(128,128))
;Resize=(128,128))
;Resize=(128,128))