ಬಿಗ್‌ಬುಲ್‌ ಎಂದೇ ಖ್ಯಾತರಾಗಿದ್ದ ಷೇರು ಮಾರುಕಟ್ಟೆ ನಿಪುಣ ರಾಕೇಶ್‌ ಝುಂಝುನ್‌ವಾಲಾ ಅವರ ಪತ್ನಿ ರೇಖಾ ಝುಂಝುನ್‌ವಾಲಾ ಅವರು ಒಂದೇ ದಿನ ಷೇರುಮಾರುಕಟ್ಟೆಯಲ್ಲಿ 800 ಕೋಟಿ ರು.ನಷ್ಟ ಅನುಭವಿಸಿದ್ದಾರೆ. ಇದು ಈವರೆಗೂ ಅವರ ನಷ್ಟದಲ್ಲಿ ಅತ್ಯಧಿಕ ಪ್ರಮಾಣದ್ದಾಗಿದೆ.

ನವದೆಹಲಿ: ಬಿಗ್‌ಬುಲ್‌ ಎಂದೇ ಖ್ಯಾತರಾಗಿದ್ದ ಷೇರು ಮಾರುಕಟ್ಟೆ ನಿಪುಣ ರಾಕೇಶ್‌ ಝುಂಝುನ್‌ವಾಲಾ ಅವರ ಪತ್ನಿ ರೇಖಾ ಝುಂಝುನ್‌ವಾಲಾ ಅವರು ಒಂದೇ ದಿನ ಷೇರುಮಾರುಕಟ್ಟೆಯಲ್ಲಿ 800 ಕೋಟಿ ರು.ನಷ್ಟ ಅನುಭವಿಸಿದ್ದಾರೆ. ಇದು ಈವರೆಗೂ ಅವರ ನಷ್ಟದಲ್ಲಿ ಅತ್ಯಧಿಕ ಪ್ರಮಾಣದ್ದಾಗಿದೆ.

ರೇಖಾ ಅವರು ಟಾಟಾ ಕಂಪನಿ ಒಡೆತನದ ಟೈಟಾನ್‌ನಲ್ಲಿ 16,792 ಕೋಟಿ ರು. ಮೌಲ್ಯದ ಶೇ.5.35 ಪಾಲು ಹೊಂದಿದ್ದರು. ಇದರ ಷೇರುಗಳು ಒಂದೇ ದಿನ ಪಾತಾಳಕ್ಕೆ ಕುಸಿತ ಕಂಡ ಪರಿಣಾಮ ರೇಖಾ ಭಾರಿ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಟೈಟಾನ್‌ ಕಂಪನಿ ಮಂಗಳವಾರ ಒಂದೇ ದಿನ ಶೇ.7ರಷ್ಟು ಕುಸಿತ ಕಂಡಿದೆ.