ರಾಮಮಂದಿರ ನಿಷ್ಪ್ರಯೋಜಕ: ಎಸ್ಪಿ ನಾಯಕನ ವಿವಾದ

| Published : May 08 2024, 01:04 AM IST

ರಾಮಮಂದಿರ ನಿಷ್ಪ್ರಯೋಜಕ: ಎಸ್ಪಿ ನಾಯಕನ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರ ನಿಷ್ಪ್ರಯೋಜಕ ಎಂದು ಹೇಳಿ ಎಸ್ಪಿ ನಾಯಕ ವಿವಾದ ಸೃಷ್ಟಿಸಿದ್ದು, ಮಂದಿರದ ನಕ್ಷೆ, ವಾಸ್ತು ಯಾವುದೂ ಸರಿಯಿಲ್ಲ ಎಂದು ರಾಮಗೋಪಾಲ್ ಯಾದವ್‌ ಕಿಡಿಕಾರಿದ್ದಾರೆ.

ಪಿಟಿಐ ಲಖನೌ

‘ಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮ ಮಂದಿರ ನಿಷ್ಪ್ರಯೋಜಕ. ಅದನ್ನು ಸರಿಯಾಗಿ ಕಟ್ಟಿಲ್ಲ’ ಎಂದು ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್‌ ಯಾದವ್ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಯಾದವ್‌ ಹೇಳಿಕೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದು, ‘ಇದು ಇಂಡಿಯಾ ಮೈತ್ರಿಕೂಟದ ನಿಜವಾದ ಮುಖ’ ಎಂದು ಹೇಳಿದ್ದಾರೆ.

ಟೀವಿ ಚಾನಲ್‌ ಒಂದರಲ್ಲಿ ಮಂಗಳವಾರ ಕೇಳಿದ ‘ರಾಮ ಮಂದಿರಕ್ಕೆ ಏಕೆ ವಿರೋಧ ಪಕ್ಷದ ನಾಯಕರು ಹೋಗಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಗೋಪಾಲ್‌ ಯಾದವ್‌, ‘ನಾವು ನಿತ್ಯ ರಾಮನ ದರ್ಶನ ಮಾಡುತ್ತೇವೆ. ಆದರೆ ಆ ಮಂದಿರ (ಅಯೋಧ್ಯೆ ರಾಮಮಂದಿರ) ನಿಷ್ಪ್ರಯೋಜಕ (ಬೇಕಾರ್‌). ದೇವಸ್ಥಾನವನ್ನು ಯಾರಾದರೂ ಹೀಗೆ ಕಟ್ಟುತ್ತಾರಾ? ಹಳೆ ದೇವಸ್ಥಾನಗಳನ್ನು ನೋಡಿ. ಅವುಗಳನ್ನು ಯಾರೂ ಹೀಗೆ ಕಟ್ಟಿಲ್ಲ. ರಾಮ ಮಂದಿರದ ನಕ್ಷೆ ಸರಿಯಾಗಿಲ್ಲ. ದಕ್ಷಿಣದಿಂದ ಉತ್ತರಕ್ಕೆ ಮಂದಿರ ಕಟ್ಟಿದ್ದು ಹಾಗೂ ವಾಸ್ತು ಕೂಡ ಸರಿಯಿಲ್ಲ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್‌, ‘ಇವರೆಲ್ಲ ವೋಟ್‌ ಬ್ಯಾಂಕ್‌ಗಾಗಿ ಭಾರತೀಯರ ನಂಬಿಕೆಗಳ ಜೊತೆ ಆಟವಾಡುತ್ತಿರುವುದಷ್ಟೇ ಅಲ್ಲ, ಶ್ರೀರಾಮನ ದೈವೀಶಕ್ತಿಗೂ ಸವಾಲು ಹಾಕುತ್ತಿದ್ದಾರೆ. ರಾಮನಿಗೆ ಸವಾಲು ಹಾಕಿದ ಯಾರಿಗೂ ಈವರೆಗೆ ಒಳ್ಳೆಯದಾಗಿಲ್ಲ’ ಎಂದು ತಿಳಿಸಿದರು.