ಸಾರಾಂಶ
ನವದೆಹಲಿ: ಅಲೋಪತಿ ಕುರಿತು ಆಕ್ಷೇಪಾರ್ಹ ಮಾಹಿತಿ ನೀಡಿ ತಮ್ಮ ಉತ್ಪನ್ನಗಳನ್ನು ವೈಭವೀಕರಿಸಿದ ಆರೋಪ ಹೊತ್ತಿರುವ ಪತಂಜಲಿ ಆಯುರ್ವೇದ ಮುಖ್ಯಸ್ಥರಾದ ಯೋಗಗುರು ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ, ಬುಧವಾರ ದೊಡ್ಡ ಹಾಹೀರಾತುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ 2 ದಿನದಲ್ಲಿ 2ನೇ ಬಾರಿ ಕ್ಷಮೆ ಕೇಳಿದ್ದಾರೆ.
ಚಿಕ್ಕ ಜಾಹೀರಾತನ್ನು ಮೊನ್ನೆ ಪ್ರಕಟಿಸಿ ಕ್ಷಮೆ ಕೇಳಿದ್ದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿತ್ತು. ಹೀಗಾಗಿ ದಿನಪತ್ರಿಕೆಗಳಲ್ಲಿ ಪತಂಜಲಿ ಸಂಸ್ಥೆಯು ಬೃಹತ್ ಜಾಹೀರಾತು (ಕಾಲು ಪುಟ) ನೀಡುವ ಮೂಲಕ ಬಹಿರಂಗ ಮತ್ತೊಮ್ಮೆ ಕ್ಷಮೆಯಾಚಿಸಿದೆ.
ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ‘ನೀವು ಕ್ಷಮೆಯಾಚನೆ ಮಾಡಿದ್ದರೂ ನಿಮ್ಮ ಪತಂಜಲಿ ಜಾಹೀರಾತುಗಳಷ್ಟೇ ಬೃಹತ್ ಪ್ರಮಾಣದಲ್ಲಿ ಜಾಹೀರಾತು ಪ್ರಕಟಿಸಿ ಕ್ಷಮೆ ಕೇಳಿದ್ದೀರಾ?’ ಎಂದು ಪ್ರಶ್ನಿಸಿ ಎಲ್ಲ ಜಾಹೀರಾತು ಕಟಿಂಗ್ಸ್‌ಗಳನ್ನು ಯಥಾವತ್ ಸ್ವರೂಪದಲ್ಲಿ ತನಗೆ ಸಲ್ಲಿಸುವಂತೆ ಸೂಚಿಸಿತ್ತು.
ರಾಮದೇವ್ ವಿರುದ್ಧ ಭಾರತೀಯ ವೈದ್ಯ ಸಂಸ್ಥೆ (ಐಎಂಎ) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಏ.30ಕ್ಕೆ ಮುಂದಿನ ವಿಚಾರಣೆ ನಿಗದಿ ಆಗಿದೆ.