ಅಕ್ರಮ ಭೂ ಕಬಳಿಕೆ ಹಗರಣದಲ್ಲಿ ಜಾರಿ ನಿರ್ದೇಶನಾಲಯ ನೀಡಿದ ಏಳು ವಿಚಾರಣಾ ಸಮನ್ಸ್‌ಗಳಿಗೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ನಿರ್ಲಕ್ಷ್ಯ ಮಾಡಿ ಗೈರಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಹೇಮಂತ್ ಸೋರೆನ್‌ಗೆ ಸೂಚಿಸಿದೆ.

ರಾಂಚಿ: ಭೂ ಅಕ್ರಮ ಕೇಸಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೀಡಿದ್ದ 7 ಸಮನ್ಸ್‌ಗಳನ್ನು ತಿರಸ್ಕರಿಸಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ಗೆ ಇದೀಗ ಸ್ಥಳೀಯ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ.

ಅಲ್ಲದೆ ಏ.3ರಂದು ತನ್ನ ಮುಂದೆ ಖುದ್ದು ಹಾಜರಾಗುವಂತೆ ಸೂಚಿಸಿದೆ.

ಇ.ಡಿ. ನೀಡಿದ್ದ 7 ಸಮನ್ಸ್‌ ಅನ್ನು ಹೇಮಂತ್‌ ತಿರಸ್ಕರಿಸಿದ್ದರು.

ಹೀಗಾಗಿ ಇ.ಡಿ. ನ್ಯಾಯಾಲಯದ ಮೊರೆ ಹೋಗಿತ್ತು.

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಇ.ಡಿ. ಸಮನ್ಸ್‌ಗೆ ಹೇಮಂತ್‌ ಅಗೌರವ ತೋರಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದ ಕೋರ್ಟ್‌ ಹಾಜರಾಗಲು ಸೂಚಿಸಿದೆ.

ಭೂಅಕ್ರಮ ಕೇಸಲ್ಲಿ ಜ.31ರಂದು ಹೇಮಂತ್‌ರನ್ನು ಇ.ಡಿ. ಬಂಧಿಸಿತ್ತು.

ಬಳಿಕ ಅವರು ಸಿಎಂ ಸ್ಥಾನಕ್ಕೆರಾಜೀನಾಮೆ ನೀಡಿದ್ದರು.