ಸಾರಾಂಶ
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಮಾಡಿದ ಸಾಧನೆಗಾಗಿ ಪ್ರಧಾನಿ ಮೋದಿ ಕೈಯಿಂದ ಪ್ರಶಸ್ತಿಗೆ ಭಾಜನರಾಗಿದ್ದ ಯುವ ಆನ್‌ಲೈನ್ ಇನ್‌ಫ್ಲ್ಯೂಯೆನ್ಸರ್ ರಣವೀರ್ ಅಲಹಾಬಾದಿಯಾ ಕೀಳು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ನವದೆಹಲಿ: ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಮಾಡಿದ ಸಾಧನೆಗಾಗಿ ಪ್ರಧಾನಿ ಮೋದಿ ಕೈಯಿಂದ ಪ್ರಶಸ್ತಿಗೆ ಭಾಜನರಾಗಿದ್ದ ಯುವ ಆನ್‌ಲೈನ್ ಇನ್‌ಫ್ಲ್ಯೂಯೆನ್ಸರ್ ರಣವೀರ್ ಅಲಹಾಬಾದಿಯಾ ಕೀಳು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಅವರ ಹೇಳಿಕೆ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಅಸ್ಸಾಂನಲ್ಲಿ ರಣವೀರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂಬೈನಲ್ಲೂ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.
ಮಹಾರಾಷ್ಟ್ರ ಮಹಿಳಾ ಆಯೋಗ ಕೂಡಾ ರಣವೀರ್ ಹಾಗೂ ಇಂಡಿಯಾ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಜಡ್ಡ್‌ಗಳು, ಕಾರ್ಯಕ್ರಮದ ಸಂಘಟಕರ ವಿರುದ್ಧ ಕ್ರಮಕ್ಕೆ ಸೂಚಿಸಿದೆ. ಹೀಗಾಗಿ ರಣವೀರ್ ಹಾಗೂ ಇತತರಿಗೆ ಬಂಧನದ ಭೀತಿ ಎದುರಾಗಿದೆ. ಈ ನಡುವೆ, ತಮ್ಮ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ರಣವೀರ್ ಅಲ್ಲಾಬಡಿಯಾ, ಬಹಿರಂಗ ಕ್ಷಮೆ ಕೋರಿದ್ದಾರೆ.
ಆಗಿದ್ದೇನು?: 12 ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿರುವ ರಣವೀರ್ ಅಲಹಾಬಾದಿಯಾ, ಇತ್ತೀಚೆಗೆ ಹೆಸರಾಂತ ಕಾಮಿಡಿಯನ್ ಸಮಯ್ ರೈನಾ ಅವರ ''ಇಂಡಿಯಾ ಗಾಟ್ ಲೆಟೆಂಟ್'' ಎಂಬ ಯೂಟ್ಯೂಬ್ ರಿಯಾಲಿಟಿ ಶೋದಲ್ಲಿ ಜಡ್ಜ್ ಆಗಿ ಪಾಲ್ಗೊಂಡಿದ್ದರು. ಅಲ್ಲಿ ಮಹಿಳಾ ಸ್ಪರ್ಧಿಯೊಬ್ಬರಿಗೆ ಜೀವಮಾನದುದ್ದಕ್ಕೂ ನಿಮ್ಮ ಅಪ್ಪ- ಅಮ್ಮನ ಸೆಕ್ಸ್ ನೋಡುತ್ತಲೇ ಕಾಲ ಕಳೆಯುತ್ತೀರಾ ಅಥವಾ ನಮ್ಮೊಂದಿಗೆ ಸೇರಿಕೊಂಡು ಅದಕ್ಕೆ ಫುಲ್‌ಸ್ಟಾಪ್ ಹಾಕುತ್ತೀರಾ ಎಂದು ಪ್ರಶ್ನೆ ಕೇಳಿ ಗಹಗಹಿಸಿ ನಕ್ಕಿದ್ದಾರೆ. ಇದಕ್ಕೆ ಉಳಿದ ಜಡ್ಜ್‌ಗಳು ಸಾಥ್ ನೀಡಿದ್ದಾರೆ. ಅವರ ಈ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ.
;Resize=(128,128))
;Resize=(128,128))
;Resize=(128,128))
;Resize=(128,128))