ಭಾರತದ ಸೇನಾ ದಾಳಿಗೆ ಪಾಕ್‌ ಬಳಿ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್‌

| N/A | Published : May 12 2025, 12:23 AM IST / Updated: May 12 2025, 04:32 AM IST

ಸಾರಾಂಶ

ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಯೂಟ್ಯೂಬರ್‌ ರಣವೀರ್‌ ಅಲಹಾಬಾದಿಯಾ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದ್ದಾರೆ.

ನವದೆಹಲಿ: ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಯೂಟ್ಯೂಬರ್‌ ರಣವೀರ್‌ ಅಲಹಾಬಾದಿಯಾ ಇದೀಗ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದ್ದಾರೆ. 

ಶನಿವಾರ ರಣವೀರ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರು. ಅದರಲ್ಲಿ ‘ಪ್ರೀತಿಯ ಪಾಕಿಸ್ತಾನಿ ಸೋದರ ಮತ್ತು ಸೋದರಿಯರೇ , ಅನೇಕ ಭಾರತೀಯರಂತೆ ನನ್ನ ಹೃದಯದಲ್ಲಿ ನಿಮ್ಮ ಬಗ್ಗೆ ದ್ವೇಷವಿಲ್ಲ. 

ನಮ್ಮಲ್ಲಿ ಹಲವರು ಶಾಂತಿ ಬಯಸುತ್ತಾರೆ. ನಾವು ಪಾಕಿಸ್ತಾನಿಗಳನ್ನು ಭೇಟಿಯಾದಾಗೆಲ್ಲಾ ನೀವು ನಮ್ಮನ್ನು ಪ್ರೀತಿಯಿಂದ ಸ್ವಾಗತಿಸುತ್ತೀರಿ. ನಾವು ದ್ವೇಷವನ್ನು ಹರಡುತ್ತಿದ್ದೇವೆ ಎಂದು ನಿಮಗೆ ಅನಿಸಿದರೆ ನಾನು ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ .ಇದಕ್ಕಾಗಿ ನಾನು ಅನೇಕ ಭಾರತೀಯರಿಂದ ದ್ವೇಷ ಎದುರಿಸಬೇಕಾಗುತ್ತದೆ. ’ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಹಲವರು ಕಿಡಿ ಕಾರಿದ ಬೆನ್ನಲ್ಲೇ ರಣವೀರ್‌ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.