ಫ್ಲೈದುಬೈ ವಿಮಾನವನ್ನು ಅಪಹರಿಸಿ, ಅದರ ಪತನಕ್ಕೆ ಮುಂದಾಗಿದ್ದ ಒಮಾನಿ ಪೈಲಟ್‌ ಧಾರ್ಮಿಕ ಮೂಲಭೂತವಾದಿಯಾಗಿದ್ದ. ಮಹಿಳೆಯರಿಗೆ ಹಸ್ತಲಾಘವ ಮಾಡಲೂ ಆತ ನಿರಾಕರಿಸುತ್ತಿದ್ದ ಎಂಬ ಮಾಹಿತಿಯನ್ನು ಆತನ ಸಹೋದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ.

-ಸ್ತ್ರೀಯರ ಜತೆ ಕೈಕುಲುಕುತ್ತಿರಲಿಲ್ಲ । ದಿನವಿಡೀ ಪ್ರಾರ್ಥನೆ ಮಾಡುತ್ತಿದ್ದ

ಟೆಲ್‌ ಅವೀವ್‌: ಫ್ಲೈದುಬೈ ವಿಮಾನವನ್ನು ಅಪಹರಿಸಿ, ಅದರ ಪತನಕ್ಕೆ ಮುಂದಾಗಿದ್ದ ಒಮಾನಿ ಪೈಲಟ್‌ ಧಾರ್ಮಿಕ ಮೂಲಭೂತವಾದಿಯಾಗಿದ್ದ. ಮಹಿಳೆಯರಿಗೆ ಹಸ್ತಲಾಘವ ಮಾಡಲೂ ಆತ ನಿರಾಕರಿಸುತ್ತಿದ್ದ ಎಂಬ ಮಾಹಿತಿಯನ್ನು ಆತನ ಸಹೋದ್ಯೋಗಿಯೊಬ್ಬರು ಬಹಿರಂಗಪಡಿಸಿದ್ದಾರೆ. ಇಸ್ರೇಲ್‌ನ ಮಾಧ್ಯಮವೊಂದರ ಜತೆ ಮಾತನಾಡಿದ ಫ್ಲೈದುಬೈ ಪೈಲಟ್‌ ಒಬ್ಬರು, ‘ಆತ 8 ತಿಂಗಳ ಹಿಂದಷ್ಟೇ ನಮ್ಮ ಸಂಸ್ಥೆಗೆ ಸೇರಿಕೊಂಡಿದ್ದ. ದಿನವಿಡೀ ಅತಿಯಾಗಿ ಪ್ರಾರ್ಥನೆ ಮಾಡುತ್ತಿದ್ದ. ಧಾರ್ಮಿಕ ತೀವ್ರವಾದಿಯಾಗಿದ್ದ ಆತ, ಮಹಿಳೆಯರೊಂದಿಗೆ ಕೈಕುಲುಕಲು ಸಹ ನಿರಾಕರಿಸುತ್ತಿದ್ದ’ ಎಂದು ವಿವರಿಸಿದ್ದಾರೆ.

==

ಒಮಾನಿ ಪೈಲಟ್‌ ಬಗ್ಗೆ ಸಂಶಯ

ವಿಮಾನ ಅಪಹರಣಕ್ಕೆ ಮುಂದಾಗಿದ್ದ ಒಮಾನಿ ಪೈಲಟ್‌ನ ಗುರುತು ಮತ್ತು ಆತ ಆ ಹುದ್ದೆಗೆ ಸೇರ್ಪಡೆಯಾದ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ. ಏಕೆಂದರೆ, ಇಸ್ರೇಲ್‌ನಲ್ಲಿ ಕಾರ್ಯಾಚರಿಸಲು ಬಯಸುವ ಯಾವುದೇ ವಿಮಾನಯಾನ ಸಂಸ್ಥೆಯು, ಇಸ್ರೇಲ್‌ನೊಂದಿಗೆ ಔಪಚಾರಿಕ ಸಂಬಂಧ ಹೊಂದಿರುವ ದೇಶಗಳ ಪೈಲಟ್‌ಗಳಿಗೆ ಮಾತ್ರ ಅಲ್ಲಿ ವಿಮಾನಗಳನ್ನು ಇಳಿಸಲು ಅನುಮತಿಸಬೇಕೆಂದು ಇಸ್ರೇಲ್‌ನಲ್ಲಿ ಕಾನೂನಿದೆ.

ಇಸ್ರೇಲ್ ಮತ್ತು ಒಮಾನ್ ನಡುವೆ ಯಾವುದೇ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳಿಲ್ಲ. ಒಮಾನ್ ಪ್ರಜೆಗಳು ಇಸ್ರೇಲ್‌ ಪ್ರವೇಶಿಸುವ ಮೊದಲು ವೀಸಾ ಪಡೆಯಬೇಕಾಗುತ್ತದೆ. ಆರೋಪಿ ಪೈಲಟ್‌ಗೆ ವಿಮಾನ ಚಲಾಯಿಸಲು ಅವಕಾಶ ನೀಡುವ ಮೂಲಕ ಯುಎಐ ತನ್ನ ವಾಯುಯಾನ ಒಪ್ಪಂದವನ್ನು ಉಲ್ಲಂಘಿಸಿದೆಯೇ ಎಂಬ ಬಗ್ಗೆ ಸಂಶಯ ಮೂಡಿದೆ. ಈ ಕುರಿತು ಇಸ್ರೇಲ್‌ ತನಿಖೆಗೆ ಆದೇಶಿಸಿದೆ.