ಕೇಂದ್ರ ಬಜೆಟ್‌ನಲ್ಲಿ : ಆಸ್ತಿ ಮಾರಿದರೆ ಹೆಚ್ಚು ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ - ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಕರ

| Published : Jul 24 2024, 12:23 AM IST / Updated: Jul 24 2024, 05:12 AM IST

ಕೇಂದ್ರ ಬಜೆಟ್‌ನಲ್ಲಿ : ಆಸ್ತಿ ಮಾರಿದರೆ ಹೆಚ್ಚು ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ - ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಕರ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ತಿ ಮಾರಾಟದಿಂದ ಬಂದ ಲಾಭವನ್ನು ಹಣದುಬ್ಬರ ಜತೆ ಹೊಂದಾಣಿಕೆ ಮಾಡಲು ಈವರೆಗೂ ನೀಡಲಾಗುತ್ತಿದ್ದ ‘ಇಂಡೆಕ್ಷೇಷನ್‌ ಬೆನಿಫಿಟ್‌’ ಅನ್ನು ಬಜೆಟ್‌ನಲ್ಲಿ ಹಿಂಪಡೆಯಲಾಗಿದೆ. ಇದರಿಂದ ರಿಯಲ್‌ ಎಸ್ಟೇಟ್‌ ವ್ಯವಹಾರಗಳ ಮೇಲೆ ಹೆಚ್ಚು ತೆರಿಗೆ ಬಿದ್ದಂತಾಗಿದೆ ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ.

ದೆಹಲಿ :  ಆಸ್ತಿ ಮಾರಾಟದಿಂದ ಬಂದ ಲಾಭವನ್ನು ಹಣದುಬ್ಬರ ಜತೆ ಹೊಂದಾಣಿಕೆ ಮಾಡಲು ಈವರೆಗೂ ನೀಡಲಾಗುತ್ತಿದ್ದ ‘ಇಂಡೆಕ್ಷೇಷನ್‌ ಬೆನಿಫಿಟ್‌’ ಅನ್ನು ಬಜೆಟ್‌ನಲ್ಲಿ ಹಿಂಪಡೆಯಲಾಗಿದೆ. ಇದರಿಂದ ರಿಯಲ್‌ ಎಸ್ಟೇಟ್‌ ವ್ಯವಹಾರಗಳ ಮೇಲೆ ಹೆಚ್ಚು ತೆರಿಗೆ ಬಿದ್ದಂತಾಗಿದೆ ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ.

ಬಜೆಟ್‌ನಲ್ಲಿ ನಿರ್ಮಲಾ ಅವರು ಎಲ್ಲ ಹಣಕಾಸು ಹಾಗೂ ಹಣಕಾಸೇತರ ಸ್ವತ್ತುಗಳ ದೀರ್ಘಾವಧಿ ಕ್ಯಾಪಿಟಲ್‌ ಗೇನ್‌ ತೆರಿಗೆಯನ್ನು ಶೇ.10ರಿಂದ ಶೇ.12.5ಕ್ಕೆ ಹೆಚ್ಚಳ ಮಾಡಿದ್ದಾರೆ. ಇದೇ ವೇಳೆ, ಆಸ್ತಿ ಮಾರಾಟ ವೇಳೆ ದೊರೆಯುತ್ತಿದ್ದ ಇಂಡೆಕ್ಷೇಷನ್‌ ಬೆನಿಫಿಟ್‌ ರದ್ದುಪಡಿಸಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಆಸ್ತಿ ಮಾರಿದವರ ಕ್ಯಾಪಿಟಲ್‌ ಗೇನ್‌ ಹೆಚ್ಚಾಗಲಿದ್ದು, ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ರಿಯಲ್‌ ಎಸ್ಟೇಟ್‌ ಉದ್ಯಮ ವಲಯ ಹೇಳುತ್ತಿದೆ.

ತೆರಿಗೆ ಹೇಗೆ ಹೆಚ್ಚಳ?

ಉದಾಹರಣೆಗೆ, 2020-21ನೇ ಸಾಲಿನಲ್ಲಿ 1 ಲಕ್ಷ ರು.ಗೆ ಆಸ್ತಿ ಖರೀದಿಸಿ, ಅದನ್ನು 2024-25ನೇ ಸಾಲಿನಲ್ಲಿ 5 ಲಕ್ಷ ರು.ಗೆ ಮಾರಾಟ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಆಸ್ತಿ ಖರೀದಿ ದರ 1 ಲಕ್ಷ ರು. ಆಗಿದ್ದರೂ, ಹಣದುಬ್ಬರಕ್ಕೆ ಹೊಂದಾಯಿಸಲ್ಪಟ್ಟ ಇಂಡೆಕ್ಷೇಷನ್‌ ಬೆನಿಫಿಟ್‌ನಿಂದಾಗಿ ಖರೀದಿ ವೆಚ್ಚವನ್ನು 1.2 ಲಕ್ಷ ರು. ಎಂದು ತೋರಿಸಬಹುದಾಗಿತ್ತು. ತನ್ಮೂಲಕ 3.8 ಲಕ್ಷ ರು. ಲಾಭ ಬಂದಿದೆ ಎಂದು ಆ ಮೊತ್ತಕ್ಕೆ ತೆರಿಗೆ ಕಟ್ಟಿದರೆ ಸಾಕಾಗಿತ್ತು.

ಆದರೆ ಇದೀಗ ಇಂಡೆಕ್ಷೇಷನ್‌ ಬೆನಿಫಿಟ್‌ ತೆಗೆದು ಹಾಕಿರುವುದರಿಂದ ಆಸ್ತಿ ಖರೀದಿ ದರ 1 ಲಕ್ಷ ರು. ಇರುತ್ತದೆ. ಆಸ್ತಿ ಮಾರಾಟದಿಂದ ಬಂದ ಲಾಭ 4 ಲಕ್ಷ ರು.ಗೆ ಏರಿಕೆಯಾಗುತ್ತದೆ. ಅದಕ್ಕೆ ತಕ್ಕಂತೆ ಕ್ಯಾಪಿಟಲ್‌ ಗೇನ್‌ ತೆರಿಗೆಯೂ ಹೆಚ್ಚಾಗುತ್ತದೆ.