ಸಾರಾಂಶ
- ಜಿಎಸ್ಟಿ, ಆಹಾರ ದರಗಳ ಇಳಿಕೆ ಎಫೆಕ್ಟ್
- ಆದರೆ ಹಣದುಬ್ಬರದಲ್ಲಿ ಕರ್ನಾಟಕ ನಂ.3---
- ಇತ್ತೀಚೆಗೆ ಜಿಎಸ್ಟಿ ಸ್ತರ, ದರಗಳನ್ನು ಇಳಿಸಲಾಗಿತ್ತು- ಇದಾದ ನಂತರ ವಿವಿಧ ವಸ್ತುಗಳ ದರ ಭಾರಿ ಇಳಿಕೆ
- ಇದರ ಪರಿಣಾಮ ಹಣದುಬ್ಬರ ಶೇ.0.25ಕ್ಕೆ ಕುಸಿತ- ಇದು 2014ರ ನಂತರದ ಅತಿ ಕನಿಷ್ಠ ಹಣದುಬ್ಬರ
- ಕರ್ನಾಟಕದಲ್ಲಿ ಶೇ.2.34. ದೇಶದಲ್ಲೇ ನಂ.3===
ಪಿಟಿಐ ನವದೆಹಲಿಅಕ್ಟೋಬರ್ ತಿಂಗಳಿನಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದಾಖಲೆಯ ಶೇ.0.25ಕ್ಕೆ ಕುಸಿತ ಕಂಡಿದೆ. ಇದು 2014ರ ಬಳಿಕದ ಅತಿ ಕನಿಷ್ಠ ಪ್ರಮಾಣವಾಗಿದೆ. ದೇಶಾದ್ಯಂತ ಹಣದುಬ್ಬರ ಭಾರೀ ಕುಸಿತ ಕಂಡಿದ್ದರೂ ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ಶೇ.2.34ರಷ್ಟು ಹಣದುಬ್ಬರ ದಾಖಲಾಗಿದ್ದು, ಇದು ದೇಶದಲ್ಲೇ 3ನೇ ಅತಿ ಗರಿಷ್ಠ ಪ್ರಮಾಣವಾಗಿದೆ.
ಜಿಎಸ್‌ಟಿ ದರದಲ್ಲಿ ಭಾರೀ ಕಡಿತ, ತರಕಾರಿ, ಹಣ್ಣು ಮತ್ತಿತರ ವಸ್ತುಗಳ ದರ ಕುಸಿತದಿಂದ ಚಿಲ್ಲರೆ ಹಣದುಬ್ಬರ ಶೇ.0.25ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಚಿಲ್ಲರೆ ಹಣದುಬ್ಬರವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 1.44ರಷ್ಟು ಮತ್ತು ಅಕ್ಟೋಬರ್ ತಿಂಗಳಲ್ಲಿ 6.21ರಷ್ಟಿತ್ತು. ಇದೀಗ ರಾಷ್ಟ್ರೀಯ ಸಾಂಖ್ಯಿಕ ಕಚೇರಿ(ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಗ್ರಾಹಕ ಬೆಲೆ ಸೂಚ್ಯಂಕದ ಅರ್ಧ ಭಾಗವಾಗವೇ ಆಗಿರುವ ಆಹಾರ ಬೆಲೆಗಳು ಅಂದರೆ ಆಹಾರ ಹಣದುಬ್ಬರವು ವರ್ಷದಿಂದ ವರ್ಷಕ್ಕೆ ಅಕ್ಟೋಬರ್ ತಿಂಗಳಲ್ಲಿ 5.02ರಷ್ಟು ಕುಸಿತ ದಾಖಲಿಸಿದೆ. ಇದು ಚಿಲ್ಲರೆ ಹಣದುಬ್ಬರ ಕುಸಿತಕ್ಕೆ ದೊಡ್ಡ ಕೊಡುಗೆ ನೀಡಿದೆ.ಜಿಎಸ್‌ಟಿ ಕಡಿತದ ಜತೆಗೆ ಎಣ್ಣೆಗಳು, ತರಕಾರಿಗಳು, ಹಣ್ಣು, ಮೊಟ್ಟೆ, ಚಪ್ಪಲಿ, ಧಾನ್ಯಗಳು, ಸಾರಿಗೆ ಮತ್ತು ಸಂವಹನದಲ್ಲಿನ ದರ ಇಳಿಕೆಯ ಪರಿಣಾಮವಾಗಿ ಅಕ್ಟೋಬರ್ ತಿಂಗಳಲ್ಲಿ ಒಟ್ಟಾರೆ ಹಣದುಬ್ಬರ ಹಾಗೂ ಆಹಾರ ಹಣದುಬ್ಬರ ಇಳಿಕೆ ದಾಖಲಿಸಿದೆ ಎಂದು ಎನ್‌ಎಸ್‌ಒ ಅಭಿಪ್ರಾಯಪಟ್ಟಿದೆ.
ಅತಿ ಹೆಚ್ಚು ಹಣದುಬ್ಬರ:ಅಕ್ಟೋಬರ್ ತಿಂಗಳಿನಲ್ಲಿ ಕೇರಳದಲ್ಲಿ ಶೇ.8.56, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.2.95 ಮತ್ತು ಕರ್ನಾಟಕದಲ್ಲಿ ಶೇ.2.34 ಹಣದುಬ್ಬರ ದಾಖಲಾಗಿದೆ. ಇವು ಅತಿ ಹೆಚ್ಚು ಹಣದುಬ್ಬರ ದಾಖಲಾದ ಟಾಪ್ 3 ರಾಜ್ಯಗಳಾಗಿವೆ.
;Resize=(128,128))
;Resize=(128,128))
;Resize=(128,128))
;Resize=(128,128))