ಸಾರಾಂಶ
ಆಹಾರ ಉತ್ಪನ್ನಗಳ ಬೆಲೆ ಹೆಚ್ಚಳದಿಂದಾಗಿ 2023ರ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.69ಕ್ಕೆ ಏರಿಕೆ ಕಂಡಿದ್ದು, ಇದು 4 ತಿಂಗಳ ಗರಿಷ್ಠವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ತಿಳಿದು ಬಂದಿದೆ.
ನವದೆಹಲಿ: ಆಹಾರ ಉತ್ಪನ್ನಗಳ ಬೆಲೆ ಹೆಚ್ಚಳದಿಂದಾಗಿ 2023ರ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.69ಕ್ಕೆ ಏರಿಕೆ ಕಂಡಿದ್ದು, ಇದು 4 ತಿಂಗಳ ಗರಿಷ್ಠವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ತಿಳಿದು ಬಂದಿದೆ.
ಗ್ರಾಹಕ ಬೆಲೆ ಸೂಚ್ಯಂಕದ ಅನ್ವಯ ಹಣದುಬ್ಬರ ಇನ್ನು 2022ರ ಡಿಸೆಂಬರ್‌ನಲ್ಲಿ ಶೇ.5.72 ಇತ್ತು. 2023ರ ನವೆಂಬರ್‌ನಲ್ಲಿ ಶೇ.5.55 ಹಾಗೂ ಆಗಸ್ಟ್‌ನಲ್ಲಿ ಶೇ.6.83ಕ್ಕೆ ಏರಿಕೆಯಾಗಿ ವರ್ಷದ ಗರಿಷ್ಠಕ್ಕೆ ಹೋಗಿತ್ತು. ಇದಾದ ನಂತರದ ಅತಿ ಗರಿಷ್ಠ ಹಣದುಬ್ಬರ ಡಿಸೆಂಬರಲ್ಲಿ ದಾಖಲಾಗಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಶೇ.4ರ ಆಸುಪಾಸಿಗೆ ಇಳಿಸಲು ಸಾಕಷ್ಟು ಕ್ರಮ ಕೈಗೊಂಡಿತ್ತು. ಆದರೆ ಅದು ಫಲ ನೀಡದೆ ಭಾರಿ ಏರಿಳಿತವಾಗುತ್ತಿದೆ.