ಸಾರಾಂಶ
‘ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ-ಸಾವಿಗೂ ನನಗೂ ಸಂಬಂಧವಿಲ್ಲ. ಘಟನೆಯನ್ನು ನಾನು ಮುಚ್ಚಿಟ್ಟಿರಲಿಲ್ಲ. ಆಕೆ ಕೊಲೆಯಾಗಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕ 10 ನಿಮಿಷ ನಂತರ ನನಗೆ ವಿಷಯ ತಿಳಿಯಿತು ಎಂದು ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಹೇಳಿದ್ದಾರೆ.
ಕೋಲ್ಕತಾ: ‘ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ-ಸಾವಿಗೂ ನನಗೂ ಸಂಬಂಧವಿಲ್ಲ. ಘಟನೆಯನ್ನು ನಾನು ಮುಚ್ಚಿಟ್ಟಿರಲಿಲ್ಲ. ಆಕೆ ಕೊಲೆಯಾಗಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕ 10 ನಿಮಿಷ ನಂತರ ನನಗೆ ವಿಷಯ ತಿಳಿಯಿತು. ನಾನು ಸಂಚಿನಲ್ಲಿ ಭಾಗಿ ಆಗಿಲ್ಲ ಎಂದು ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಹೇಳಿದ್ದಾರೆ.
ಈತನನ್ನು 18 ದಿನ ಕಾಲ ವಿಚಾರಣೆ ಮಾಡಲಾಗಿದ್ದು, 2 ಪಾಲಿಗ್ರಾಫ್ ಪರೀಕ್ಷೆ ಕೂಡ ಮಾಡಲಾಗಿದೆ. ಆದರೆ, ‘ಪೊಲೀಸರಿಗೆ ದೂರು ನೀಡುವವರೆಗೂ ವೈದ್ಯರ ಸಾವಿನ ಬಗ್ಗೆ ತಿಳಿದಿರಲಿಲ್ಲ’ ಎಂದು ಅದೇ ರಾಗ ಹಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
‘ಆ.9ರ ಬೆಳಗ್ಗೆ 9.30ಕ್ಕೆ ವೈದ್ಯೆಯ ಮೃತದೇಹವನ್ನು ಸೆಮಿನಾರ್ ಹಾಲ್‌ನಲ್ಲಿ ನೋಡಿ ಮೊದಲ ವರ್ಷದ ಪಿಜಿ ವಿದ್ಯಾರ್ಥಿನಿಯು ಅಲ್ಲಿದ್ದವರಿಗೆ ಮಾಹಿತಿ ನೀಡಿದ್ದಾಳೆ. 10.10ಕ್ಕೆ ಈ ಬಗ್ಗೆ ಔಟ್‌ಪೋಸ್ಟ್‌ನಲ್ಲಿರುವ ಪೊಲೀಸರು ತಾಲಾ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. 10.20ಕ್ಕೆ ನನಗೆ ವಿಷಯ ತಿಳಿಯಿತು’ ಎಂದು ಘೋಷ್ ಹೇಳಿದ್ದಾರೆ ಎಂದು ಗೊತ್ತಾಗಿದೆ.
ಘೋಷ್‌ಗೂ ಅತ್ಯಾಚಾರ ಆರೋಪಿ ಸಂಜಯ ರಾಯ್‌ಗೂ ಅತ್ಯಾಪ್ತ ಸಂಬಂಧವಿದೆ ಎಂಬ ದೂರಿನ ಕಾರಣ ಪೊಲೀಸರು ಘೋಷ್ ವಿಚಾರಣೆ ನಡೆಸುತ್ತಿದ್ದಾರೆ.