ಕಂಚಿ ಪೀಠದ 71ನೇ ಪೀಠಾಧಿಪತಿಯಾಗಿ ಸತ್ಯ ಚಂದ್ರ ಶೇಖರೇಂದ್ರ ಸರಸ್ವತಿ ದೀಕ್ಷೆ

| N/A | Published : May 01 2025, 12:51 AM IST / Updated: May 01 2025, 04:46 AM IST

ಕಂಚಿ ಪೀಠದ 71ನೇ ಪೀಠಾಧಿಪತಿಯಾಗಿ ಸತ್ಯ ಚಂದ್ರ ಶೇಖರೇಂದ್ರ ಸರಸ್ವತಿ ದೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಕಂಚಿ ಕಾಮಕೋಟಿ ಪೀಠದ 71ನೇ ಪೀಠಾಧಿಪತಿಗಳಾಗಿ ಶ್ರೀ ಸತ್ಯ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಬುಧವಾರ, ಅಕ್ಷಯ ತೃತಿಯದಂದು ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ಕಾಂಚೀಪುರಂ: ಕಂಚಿ ಕಾಮಕೋಟಿ ಪೀಠದ 71ನೇ ಪೀಠಾಧಿಪತಿಗಳಾಗಿ ಶ್ರೀ ಸತ್ಯ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಬುಧವಾರ, ಅಕ್ಷಯ ತೃತಿಯದಂದು ಸನ್ಯಾಸ ದೀಕ್ಷೆ ಸ್ವೀಕರಿಸಿದರು. 

ತಮಿಳುನಾಡಿನ ಕಾಂಚೀಪುರಂನಲ್ಲಿ ಗಣೇಶ ಶರ್ಮ ದ್ರಾವಿಡ್ ಅವರಿಗೆ ಕಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಸ್ವಾಮಿಗಳು ಸನ್ಯಾಸ ದೀಕ್ಷೆ ನೀಡಿ ಶ್ರೀ ಸತ್ಯ ಚಂದ್ರಶೇಖರೇಂದ್ರ ಸರಸ್ವತೀ ಎಂಬ ನೂತನ ಅಭಿದಾನ ನೀಡಿದರು. 

‘ಶ್ರೀ ಕಾಂಚಿ ಕಾಮಕೋಟಿ ಪೀಠವನ್ನು ಸ್ಥಾಪಿಸಿದ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿಯಂದೇ ನೂತನ ಪೀಠಾಧಿಪತಿಗಳ ಆಗಮನವಾಗಿದೆ. ಪೀಠವು ಆದಿ ಶಂಕರರ ನಂತರ 70 ಪೀಠಾಧೀಶರ ಅವಿಚ್ಛಿನ್ನ ಪರಂಪರೆಯ ಹೆಗ್ಗಳಿಕೆ ಹೊಂದಿದೆ’ ಎಂದು ಕಂಚಿ ಪೀಠ ತಿಳಿಸಿದೆ.