ಜನರಿಗೆ ಭಯ ಹುಟ್ಟಿಸಿದ ಬೆಳ್ಳಿ, ಚಿನ್ನ ದರ ಏರಿಕೆ

| N/A | Published : Sep 30 2025, 05:47 AM IST

gold silver price

ಸಾರಾಂಶ

ಕಳೆದ 9 ತಿಂಗಳಿನಿಂದ ಸತತ ಏರಿಕೆ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆ ಸೋಮವಾರ ಮತ್ತೊಂದು ದಾಖಲೆ ಮುಟ್ಟಿದೆ. ಬೆಂಗಳೂರಿನಲ್ಲಿ 1 ಕೆಜಿ ಚಿನ್ನದ ಬೆಲೆ 1.53 ಲಕ್ಷ ರು.ಗೆ ತಲುಪಿದ್ದರೆ, ದೆಹಲಿಯಲ್ಲಿ 1.50 ಲಕ್ಷ ಮುಟ್ಟಿದೆ. ಚಿನ್ನದ ಬೆಲೆ 1.50 ಲಕ್ಷ ರು.ದ ಗಡಿ ದಾಟಿದ್ದು ಇದೇ ಮೊದಲು.

ನವದೆಹಲಿ: ಕಳೆದ 9 ತಿಂಗಳಿನಿಂದ ಸತತ ಏರಿಕೆ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆ ಸೋಮವಾರ ಮತ್ತೊಂದು ದಾಖಲೆ ಮುಟ್ಟಿದೆ. ಬೆಂಗಳೂರಿನಲ್ಲಿ 1 ಕೆಜಿ ಚಿನ್ನದ ಬೆಲೆ 1.53 ಲಕ್ಷ ರು.ಗೆ ತಲುಪಿದ್ದರೆ, ದೆಹಲಿಯಲ್ಲಿ 1.50 ಲಕ್ಷ ಮುಟ್ಟಿದೆ. ಚಿನ್ನದ ಬೆಲೆ 1.50 ಲಕ್ಷ ರು.ದ ಗಡಿ ದಾಟಿದ್ದು ಇದೇ ಮೊದಲು.

ಚಿನ್ನ ದಾಖಲೆ:

ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆಯಾಗಿದ್ದು, ಶೇ.99.9 ಶುದ್ಧತೆಯ ಹೊನ್ನು 10 ಗ್ರಾಂಗೆ 1,19,500 ರು. ಆಗಿದೆ. ಶನಿವಾರ ಇದು 1,18,000 ರು ಇತ್ತು. ಅತ್ತ ಬೆಂಗಳೂರಿನಲ್ಲಿ ಶೇ.99.5 ಶುದ್ಧತೆಯ ಚಿನ್ನದ ಬೆಲೆ 1,20,000 ರು. ಆಗಿದೆ.

ಅಮೆರಿಕದ ರಾಷ್ಟ್ರೀಯ ಬ್ಯಾಂಕ್‌ ಬಡ್ಡಿದರ ಕಡಿತ ಮಾಡುವ ನಿರೀಕ್ಷೆ ಇರುವುದು, ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಹಬ್ಬಗಳ ಸಾಲು ಆರಂಭವಾಗಿರುವ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಚಿನ್ನ, ಬೆಳ್ಳಿ ಬೆಲೆಯ ನಾಗಾಲೋಟಕ್ಕೆ ಕಾರಣ ಎನ್ನಲಾಗಿದೆ.

Read more Articles on