ಸಾರಾಂಶ
Sheetal, Toman Kumar , Para World Archery Championships , India
- 400 ಮೀ. ಓಟದಲ್ಲಿ ಬೆಳ್ಳಿ ಗೆದ್ದ ದೀಪ್ತಿ ಜೀವನ್‌ಜಿ
ನವದೆಹಲಿ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನವೇ ಭಾರತ ಮೂರು ಪದಕಗಳನ್ನು ಗೆದ್ದಿದೆ. ಪುರುಷರ ಹೈಜಂಪ್‌ನ ಟಿ63 ವಿಭಾಗ (ಕಾಲಿನ ದೌರ್ಬಲ್ಯ)ದಲ್ಲಿ ಶೈಲೇಶ್ ಕುಮಾರ್ 1.91 ಮೀ. ಎತ್ತರಕ್ಕೆ ಜಿಗಿದು ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.ಟಿ63 ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ಹಾಗೂ ಹಾಲಿ ಪ್ಯಾರಾಲಿಂಪಿಕ್ ಚಾಂಪಿಯನ್ ಅಮೆರಿಕದ ಎರ್ಜಾ ಫ್ರೆಚ್‌ರನ್ನು ಶೈಲೇಶ್ ಹಿಂದಿಕ್ಕಿದರು. ಫ್ರೆಚ್ 1.85 ಮೀ. ಜಿಗಿದು ಬೆಳ್ಳಿ ಪಡೆದರು. ಭಾರತದ ವರುಣ್ ಸಿಂಗ್ ಭಾಟಿಗೆ ಕಂಚು ಸಿಕ್ಕಿತು. ವರುಣ್ ಸಹ 1.85 ಮೀ. ಜಿಗಿದರು. ಆದರೆ ಫ್ರೆಚ್ ಕಡಿಮೆ ಯತ್ನಗಳನ್ನು ತೆಗೆದುಕೊಂಡ ಕಾರಣ ಅವರಿಗೆ ಬೆಳ್ಳಿ ದೊರೆಯಿತು.
ಕಳೆದ ಆವೃತ್ತಿಯ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಶೈಲೇಶ್, 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಸ್ಥಾನಿಯಾಗಿದ್ದರು.ಇನ್ನು, ಮಹಿಳೆಯರ 400 ಮೀ. ಟಿ20 ಫೈನಲ್‌ನಲ್ಲಿ ಭಾರತದ ದೀಪ್ತಿ ಜೀವನ್‌ಜಿ ಬೆಳ್ಳಿಗೆ ತೃಪ್ತಿಪಟ್ಟರು. ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ದೀಪ್ತಿ, 55.16 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು. ಟರ್ಕಿಯ ಆಯ್ಸೆಲ್ ಓನ್ಡರ್ 54.51 ಸೆಕೆಂಡ್‌ಗಳಲ್ಲಿ ಓಡಿ ತಮ್ಮ ಹೆಸರಲ್ಲೇ ಇದ್ದ ವಿಶ್ವ ದಾಖಲೆ (54.96 ಸೆ.)ಯನ್ನು ಉತ್ತಮಪಡಿಸಿಕೊಂಡರು.