ಸಾರಾಂಶ
ನವದೆಹಲಿ: 2024-25 ನೇ ಸಾಲಿನಲ್ಲಿ ಸಂಪುಟದ ಸಚಿವರು, ಸಂಪುಟ ಕಾರ್ಯದರ್ಶಿಗಳು, ಪ್ರಧಾನ ಮಂತ್ರಿ ಕಾರ್ಯಾಯಾಲಯ ಸಿಬ್ಬಂದಿಗಳು , ಅತಿಥಿಗಳ ಆತಿಥ್ಯಕ್ಕಾಗಿ1,248.91 ಕೋಟಿ ರು ಮೀಸಲಿರಿಸಲಾಗಿದೆ. ಆದರೆ ಈ ಪ್ರಮಾಣ 2023- 24 ನೇ ಸಾಲಿನಲ್ಲಿ ಅನುದಾನಕ್ಕಿಂತ ಕಡಿಮೆ. ಕಳೆದ ಬಾರಿ 1,803 ಕೋಟಿಯನ್ನು ಮೀಸಲಿರಿಸಲಾಗಿತ್ತು.
ಕ್ಯಾಬಿನೆಟ್ ಸಚಿವರು,ಕೇಂದ್ರ ರಾಜ್ಯ ಸಚಿವರು, ಪ್ರಧಾನ ಮಂತ್ರಿ, ಮಾಜಿ ಪ್ರಧಾನಿಗಳ ಸಂಬಳ, ಪ್ರಯಾಣ ವೆಚ್ಚ, ಇತರ ಭತ್ಯೆಗಳನ್ನು ಒಳಗೊಂಡಿರುತ್ತದೆ.ಈ ಪೈಕಿ ಕೇಂದ್ರ ಸಚಿವರ ಖರ್ಚುಗಳಿಗೆ 828.36 ಕೋಟಿಯನ್ನು ಹಂಚಿಕೆ ಮಾಡಲಾಗಿದೆ.
ಆದರೆ 2023-24ನೇ ಸಾಲಿನ ಬಜೆಟ್‌ನಲ್ಲಿ ಈ ಪ್ರಮಾಣ 1.28 ಸಾವಿರ ಕೋಟಿ ಮೀಸಲಿರಿಸಲಾಗಿತ್ತು. ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಗಳಿಗೆ ಈ ಬಾರಿ 202 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗೆ 72.11 ಕೋಟಿ ರು. , ಕ್ಯಾಬಿನೆಟ್ ಕಾರ್ಯದರ್ಶಿಗಳಿಗೆ 75.24 ಕೋಟಿ ರು. ಅನುದಾನ ಹಂಚಿಕೆ ಮಾಡಲಾಗಿದೆ. ಉಳಿದಂತೆ ಪ್ರಧಾನ ಮಂತ್ರಿ ಕಾರ್ಯಾಯಾಲಯದ ವೆಚ್ಚಗಳಿಗೆ 65.30 ಕೋಟಿ. ರು ನೀಡಲಾಗಿದೆ. ಕೇಂದ್ರದ ವಿಶೇಷ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳ ಆತಿಥ್ಯಗಳಿಗೆ 4 ಕೋಟಿ ರು. , ಮಾಜಿ ರಾಜ್ಯಪಾಲರಿಗೆ 1.80 ಕೋಟಿ ಹಂಚಿಕೆ ಮಾಡಲಾಗಿದೆ.