ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಭಾನುವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅಣ್ಣಾ ಡಿಎಂಕೆಯಂತೆಯೇ ಭರ್ಜರಿ ಪುಕ್ಕಟೆ ಗ್ಯಾರಂಟಿ ಭರವಸೆಗಳ ಮಳೆ ಸುರಿಸಿದೆ. ಮಹಿಳೆಯರಿಗೆ 2000 ರು. ಮಾಸಿಕ ಸಹಾಯಧನ, ಅರ್ಹ 20 ಲಕ್ಷ ರೈತ ಕುಟುಂಬಗಳ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, 35 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್- ಪ್ರಮುಖವಾದವು.
- ಸ್ತ್ರೀಯರ ಮಾಸಿಕ ಸಹಾಯಧನ 1,000 ರು.ನಷ್ಟು ಹೆಚ್ಚಳ
- ಹಳೇ ಟೀವಿ, ಫ್ರಿಡ್ಜ್ ಬದಲಿಸಲು ₹8000 ಕೂಪನ್- ಉಪಹಾರ ಯೋಜನೆ 8ನೇ ತರಗತಿ ತನಕ ವಿಸ್ತರಣೆ
- 20 ಲಕ್ಷ ರೈತ ಕುಟುಂಬಗಳಿಗೆ ಉಚಿತ ಪಂಪ್‌ಸೆಟ್- ವೃದ್ಧರ ಪಿಂಚಣಿ ₹2,000 ಗೆ । 35 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್
- ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರು. ತನಕ ಬಡ್ಡಿ ರಹಿತ ಸಾಲ=======
ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಭಾನುವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅಣ್ಣಾ ಡಿಎಂಕೆಯಂತೆಯೇ ಭರ್ಜರಿ ಪುಕ್ಕಟೆ ಗ್ಯಾರಂಟಿ ಭರವಸೆಗಳ ಮಳೆ ಸುರಿಸಿದೆ. ಮಹಿಳೆಯರಿಗೆ 2000 ರು. ಮಾಸಿಕ ಸಹಾಯಧನ, ಅರ್ಹ 20 ಲಕ್ಷ ರೈತ ಕುಟುಂಬಗಳ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, 35 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್- ಪ್ರಮುಖವಾದವು.ಇದೇ ವೇಳೆ, ಮಹಿಳೆಯರು ಮನೆಯಲ್ಲಿನ ಹಳೆಯ ಗೃಹೋಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು (ಟೀವಿ, ಫ್ರಿಡ್ಜ್, ವಾಷಿಂಗ್ ಮಷಿನ್, ಮಿಕ್ಸಿ, ಗ್ರೈಂಡರ್ ಇತ್ಯಾದಿ) ಬದಲಿಸಿ ಹೊಸದನ್ನು ಖರೀದಿಸಲು 8,000 ರು. ಮೌಲ್ಯದ ‘ಇಲ್ಲಥರಸಿ’ (ಮನೆಯ ರಾಣಿ) ಕೂಪನ್ ನೀಡುವ ಯೋಜನೆ ಘೋಷಿಸಲಾಗಿದೆ.
ಚೆನ್ನೈನಲ್ಲಿನ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಪ್ರಣಾಳಿಕೆ ಬಿಡುಗಡೆ ಮಾಡಿದರು.ಪ್ರಣಾಳಿಕೆಯಲ್ಲೇನಿದೆ?
- ರಾಜ್ಯದ 1.37 ಕೋಟಿ ಮಹಿಳೆಯರಿಗೆ ಇದುವರೆಗೆ ನೀಡುತ್ತಿದ್ದ ಮಾಸಿಕ 1,000 ರು. ಆರ್ಥಿಕ ನೆರವನ್ನು 2,000 ರು. ಹೆಚ್ಚಿಸಲಾಗುತ್ತದೆ- ವೃದ್ಧರ ಪಿಂಚಣಿಯನ್ನು ಸಹ 2,000 ರು.ಗೆ ಹೆಚ್ಚಿಸಲಾಗಿದೆ.
- ಇನ್ನು ಸದ್ಯ ರಾಜ್ಯದ 20 ಲಕ್ಷ ರೈತರಿಗೆ ಹೊಸ ಮೀಟರ್ ರಹಿತ ಪಂಪ್‌ಸೆಟ್- ಮಹಿಳಾ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ರು. ತನಕ ಬಡ್ಡಿ ರಹಿತ ಸಾಲ
ಆರೋಗ್ಯ ವಿಮಾ ಪ್ರಯೋಜನ 1 ಲಕ್ಷ ರು.ಗೆ ಹೆಚ್ಚಳ, ಈಗಿರುವ ಡಯಾಲಿಸಿಸ್ ಕೇಂದ್ರಗಳನ್ನ ದುಪ್ಪಟ್ಟ- 35 ಲಕ್ಷ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಉಚಿತ ಲ್ಯಾಪ್‌ಟಾಪ್
ಶಾಲೆಗಳಲ್ಲಿ 1-5 ತರಗತಿ ಮಕ್ಕಳಿಗೆ ನೀಡಲಾಗುತ್ತಿದ್ದ ಉಪಾಹಾರ ಯೋಜನೆಯನ್ನು 8ನೇ ತರಗತಿ ತನಕ ವಿಸ್ತರಣೆ