ತಮಿಳುನಾಡಿನ ತಿರುಪ್ಪರಂಕುಂದ್ರಂ ಸುಬ್ರಮಣ್ಯಸ್ವಾಮಿ ದೇವಸ್ಥಾನದ ದೀಪೋತ್ಸವಕ್ಕೆ ಸಂಬಂಧಿಸಿದಂತೆ ಹಿಂದೂಗಳ ಪರ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಜಿ.ಆರ್.ಸ್ವಾಮಿನಾಥನ್ ವಿರುದ್ಧ ಡಿಎಂಕೆ ನೇತೃತ್ವದ ಇಂಡಿಯಾ ಕೂಟದ ಪಕ್ಷಗಳು ವಾಗ್ದಂಡನೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
-ತಿರುಪ್ಪರಂಕುಂದ್ರಂ ದೀಪೋತ್ಸವ ವಿವಾದಮದುರೈ: ತಮಿಳುನಾಡಿನ ತಿರುಪ್ಪರಂಕುಂದ್ರಂ ಸುಬ್ರಮಣ್ಯಸ್ವಾಮಿ ದೇವಸ್ಥಾನದ ದೀಪೋತ್ಸವಕ್ಕೆ ಸಂಬಂಧಿಸಿದಂತೆ ಹಿಂದೂಗಳ ಪರ ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಜಿ.ಆರ್.ಸ್ವಾಮಿನಾಥನ್ ವಿರುದ್ಧ ಡಿಎಂಕೆ ನೇತೃತ್ವದ ಇಂಡಿಯಾ ಕೂಟದ ಪಕ್ಷಗಳು ವಾಗ್ದಂಡನೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?:ದೇಗುಲದ ದೀಪೋತ್ಸವ 2 ಪುರಾತನ ದೀಪಸ್ತಂಭಗಳ ಪೈಕಿ ಒಂದರಲ್ಲಿ ನಡೆಯುತ್ತದೆ. ಒಂದು ಸ್ತಂಭ ಬೆಟ್ಟದ ತಳದಲ್ಲಿದ್ದರೆ, ಮತ್ತೊಂದು ಮಧ್ಯಭಾಗದಲ್ಲಿದೆ. 100 ವರ್ಷಗಳಿಂದ ಕೆಳಗಿನ ಸ್ತಂಭದಲ್ಲೇ ದೀಪ ಬೆಳಗಲಾಗುತ್ತಿದೆ. ಆದರೆ ಮೇಲಿನ ಸ್ತಂಭದಲ್ಲೂ ದೀಪ ಬೆಳಗಿಸಲು ಅವಕಾಶ ನೀಡಬೇಕೆಂಬುದು ಭಕ್ತರ ಬೇಡಿಕೆ. ಮೇಲಿನ ಸ್ತಂಭದ ಬಳಿ ದರ್ಗಾ ಇರುವುದರಿಂದ, ಇದು ಹಿಂದೂ-ಮುಸ್ಲಿಂ ಘರ್ಷಣೆಗೆ ಕಾರಣವಾಗಬಹುದು ಎಂಬುದು ಸರ್ಕಾರದ ವಾದ. ಆತಂಕ.
ಈ ನಡುವೆ ಮದ್ರಾಸ್ ಹೈಕೋರ್ಟ್ ನ್ಯಾ. ಜಿ.ಆರ್. ಸ್ವಾಮಿನಾಥನ್, ‘ಮೇಲಿನ ಸ್ತಂಭದಲ್ಲಿ ದೀಪ ಬೆಳಗಿಸಬೇಕು. ಅದು ಸಹ ದೇವಸ್ಥಾನದ ಆಸ್ತಿಯಾಗಿದ್ದು, ಆಸ್ತಿ ಹಕ್ಕನ್ನು ದೃಢಪಡಿಸಿದಂತಾಗುತ್ತದೆ’ ಎಂದು ತೀರ್ಪು ನೀಡಿದ್ದರು. ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹೀಗಾಗಿ ಹೈಕೋರ್ಟ್ ಮೂಲಕ ವಾಗ್ದಂಡೆಗೆ ಇಂಡಿ ಕೂಟ ಮುಂದಾಗಿದೆ.