ಸಾರಾಂಶ
ಕಳೆದ ಆಗಸ್ಟ್‌ನಲ್ಲಿ ರಾಜ್ಯಸಭಾ ಸದನದಲ್ಲಿ ಕಲಾಪಗಳಿಗೆ ಅಡ್ಡಿ ಪಡಿಸಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್, ಮಾಜಿ ಸಂಸದ ಎಲ್. ಹನುಮಂತಯ್ಯ ಹಾಗೂ ಎಎಪಿ ಸಂಸದ ಸಂಜಯ್ ಸಿಂಗ್ ಸೇರಿದಂತೆ 12 ಸಂಸದರನ್ನು ತಪ್ಪಿತಸ್ಥರೆಂದು ರಾಜ್ಯಸಭೆಯ ಹಕ್ಕುಚ್ಯುತಿ ಸಮಿತಿ ಪರಿಗಣಿಸಿದೆ
ನವದೆಹಲಿ: ಕಳೆದ ಆಗಸ್ಟ್‌ನಲ್ಲಿ ರಾಜ್ಯಸಭಾ ಸದನದಲ್ಲಿ ಕಲಾಪಗಳಿಗೆ ಅಡ್ಡಿ ಪಡಿಸಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್, ಮಾಜಿ ಸಂಸದ ಎಲ್. ಹನುಮಂತಯ್ಯ ಹಾಗೂ ಎಎಪಿ ಸಂಸದ ಸಂಜಯ್ ಸಿಂಗ್ ಸೇರಿದಂತೆ 12 ಪ್ರತಿಪಕ್ಷ ಸಂಸದರನ್ನು ತಪ್ಪಿತಸ್ಥರೆಂದು ರಾಜ್ಯಸಭೆಯ ಹಕ್ಕುಚ್ಯುತಿ ಸಮಿತಿ ಪರಿಗಣಿಸಿದೆ ಮತ್ತು ಭವಿಷ್ಯದಲ್ಲಿ ಅಂತಹ ನಡವಳಿಕೆಯನ್ನು ದೂರವಿರುವಂತೆ ಎಚ್ಚರಿಕೆ ನೀಡಿದೆ.
ಗುರುವಾರ ಸಮಿತಿ ಸಂಸತ್ತಿನ ಮೇಲ್ಮನೆಯಲ್ಲಿ ಮಂಡಿಸಿದ ವರದಿಯಲ್ಲಿ, ಸಂಜಯ್ ಸಿಂಗ್ ಅವರನ್ನು ಸಭಾಪತಿಯ ನಿರ್ದೇಶನಗಳನ್ನು ಕಡೆಗಣಿಸಿದ ತಪ್ಪಿತಸ್ಥರೆಂದು ಪರಿಗಣಿಸಿದೆ. ಈ ವಿಚಾರದಲ್ಲಿ ಸಿಂಗ್ ಅವರ ಬೇಷರತ್ ಕ್ಷಮೆಯನ್ನು ಸಮಿತಿ ಅಂಗೀಕರಿಸಿದ್ದು, ಅವರು ಅನುಭವಿಸಿದ ಶಿಕ್ಷೆ ಸಾಕು ಎಂದು ಪರಿಗಣಿಸಿದ ನಂತರ ಅವರ ಅಮಾನತು ರದ್ದುಗೊಳಿಸಲು ಶಿಫಾರಸು ಮಾಡಿದೆ. ಉಳಿದ 11 ಮಂದಿ ಸಂಸದರಿಗೆ ಎಚ್ಚರಿಕೆ ನೀಡಿದೆ.ಸದನದ ನಿಯಮಗಳನ್ನು ಉಲ್ಲಂಘಿಸಿದಕ್ಕೆ ಸಂಜಯ್ ಸಿಂಗ್ ಅವರನ್ನು ಕಳೆದ ಜುಲೈನಲ್ಲಿ ಅಮಾನತು ಮಾಡಿತ್ತು.