‘ಸಮವಸ್ತ್ರ ತೊಟ್ಟು, ಲಾಠಿ ಹಿಡಿದು ದೈಹಿಕ ಚಟುವಟಿಕೆ ನಡೆಸಿದ ಮಾತ್ರಕ್ಕೆ ಸಂಘ ಅರೆಸೇನಾ ಸಂಘಟನೆಯಲ್ಲ. ಬಿಜೆಪಿಯನ್ನು ನೋಡಿ ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಅದು ದೊಡ್ಡ ತಪ್ಪು. ಸಂಘದ ವಿರುದ್ಧ ಇಂಥ ಸುಳ್ಳು ಕಥನಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಮುಖ್ಯಸ್ಥ ಡಾ. ಮೋಹನ್ ಭಾಗ್ವತ್ ಹೇಳಿದ್ದಾರೆ.

ಭೋಪಾಲ್‌: ‘ಸಮವಸ್ತ್ರ ತೊಟ್ಟು, ಲಾಠಿ ಹಿಡಿದು ದೈಹಿಕ ಚಟುವಟಿಕೆ ನಡೆಸಿದ ಮಾತ್ರಕ್ಕೆ ಸಂಘ ಅರೆಸೇನಾ ಸಂಘಟನೆಯಲ್ಲ. ಬಿಜೆಪಿಯನ್ನು ನೋಡಿ ಸಂಘವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ, ಅದು ದೊಡ್ಡ ತಪ್ಪು. ಸಂಘದ ವಿರುದ್ಧ ಇಂಥ ಸುಳ್ಳು ಕಥನಗಳನ್ನು (ನರೇಟಿವ್) ನಿರ್ಮಿಸಲಾಗುತ್ತಿದೆ’ ಎಂದು ಮುಖ್ಯಸ್ಥ ಡಾ. ಮೋಹನ್ ಭಾಗ್ವತ್ ಹೇಳಿದ್ದಾರೆ.

ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಬಿಜೆಪಿ ನೋಡಿ ಸಂಘವನ್ನು ಅರ್ಥಮಾಡಿಕೊಳ್ಳುವುದು ದೊಡ್ಡ ತಪ್ಪು. ಇತ್ತೀಚಿನ ದಿನಗಳಲ್ಲಿ, ಜನರು ಮಾಹಿತಿ ಸಂಗ್ರಹಿಸಲು ಮೂಲಕ್ಕೆ ಹೋಗುವುದಿಲ್ಲ. ವಿಕಿಪೀಡಿಯಾಕ್ಕೆ ಹೋಗುತ್ತಾರೆ. ಅಲ್ಲಿರುವುದೆಲ್ಲವೂ ನಿಜವಲ್ಲ. ವಿಶ್ವಾಸಾರ್ಹ ಮೂಲಗಳಿಗೆ ಹೋದರೆ ಮಾತ್ರ ಸಂಘ ಅರ್ಥವಾಗುತ್ತದೆ. ಇಲ್ಲದಿದ್ದರೆ ಸಂಘವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ’ ಎಂದರು.

‘ಸಂಘವು ಸ್ವಯಂಸೇವಕರನ್ನು ಬೆಳೆಸುತ್ತದೆ. ಭಾರತದ ಪರಮ ವೈಭವಕ್ಕಾಗಿ ಕೆಲಸ ಮಾಡಲು ಅವರಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ’ ಎಂದು ತಿಳಿಸಿದರು.

ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಬಿಜೆಪಿ ನೋಡಿ ಸಂಘವನ್ನು ಅರ್ಥಮಾಡಿಕೊಳ್ಳುವುದು ದೊಡ್ಡ ತಪ್ಪು. ಇತ್ತೀಚಿನ ದಿನಗಳಲ್ಲಿ, ಜನರು ಮಾಹಿತಿ ಸಂಗ್ರಹಿಸಲು ಮೂಲಕ್ಕೆ ಹೋಗುವುದಿಲ್ಲ. ವಿಕಿಪೀಡಿಯಾಕ್ಕೆ ಹೋಗುತ್ತಾರೆ. ಅಲ್ಲಿರುವುದೆಲ್ಲವೂ ನಿಜವಲ್ಲ. ವಿಶ್ವಾಸಾರ್ಹ ಮೂಲಗಳಿಗೆ ಹೋದರೆ ಮಾತ್ರ ಸಂಘ ಅರ್ಥವಾಗುತ್ತದೆ. ಇಲ್ಲದಿದ್ದರೆ ಸಂಘವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ’ ಎಂದರು.

‘ಸಂಘವು ಸ್ವಯಂಸೇವಕರನ್ನು ಬೆಳೆಸುತ್ತದೆ. ಭಾರತದ ಪರಮ ವೈಭವಕ್ಕಾಗಿ ಕೆಲಸ ಮಾಡಲು ಅವರಲ್ಲಿ ಮೌಲ್ಯಗಳನ್ನು ಬೆಳೆಸುತ್ತದೆ’ ಎಂದು ತಿಳಿಸಿದರು.

ಅಕ್ಷಯ್‌ ಖನ್ನಾ ಚಿತ್ರಗಳು ಒಂದೇ ವರ್ಷದಲ್ಲಿ ₹2000 ಕೋಟಿ ಗಳಿಕೆ! 

ಮುಂಬೈ: ಧುರಂಧರ್‌ ಸಿನಿಮಾದ ಮೂಲಕ ಖ್ಯಾತಿಯ ಉತ್ತುಂಗಕ್ಕೇರಿರುವ ನಟ ಅಕ್ಷಯ್‌ ಖನ್ನಾ ಅವರ ಸಿನಿಮಾಗಳು 2025ರಲ್ಲಿ (ಒಂದೇ ವರ್ಷದಲ್ಲಿ) 2000 ಕೋಟಿ ರು. ಗಳಿಸಿವೆ. ಈ ಮೂಲಕ ಶಾರುಖ್‌ ಖಾನ್‌ ನಂತರ ಇಂಥ ಸಾಧನೆ ಮಾಡಿದ 2ನೇ ನಟ ಎನಿಸಿಕೊಂಡಿದ್ದಾರೆ.

ಅಕ್ಷಯ್‌ ಕಳೆದ ವರ್ಷ ದುರಂಧರ್‌ ಮತ್ತು ಛಾವಾ ಸಿನಿಮಾದಲ್ಲಿ ನಟಿಸಿದ್ದರು. ಧುರಂಧರ್‌ 1167 ಕೋಟಿ ರು. ಗಳಿಸಿದ್ದರೆ, ಛಾವಾ 809 ಕೋಟಿ ರು. ಗಳಿಸಿದೆ. ಈ ಮೂಲಕ ಗಳಿಕೆ 2000 ಕೋಟಿ ರು. ದಾಟಿದೆ.

1 ವರ್ಷದಲ್ಲಿ 2000 ಕೋಟಿ ಗಳಿಸಿದ ನಟರ ಪಟ್ಟಿಯಲ್ಲಿ ಇದುವರೆಗೆ ಶಾರುಖ್‌ ಖಾನ್‌ ಮಾತ್ರವಿದ್ದರು. ಅವರು 2023ರಲ್ಲಿ ಪಠಾಣ್‌, ಜವಾನ್‌, ಡಂಕಿ ಸಿನಿಮಾದ ಮೂಲಕ ಜಾಗತಿಕವಾಗಿ 2685 ಕೋಟಿ ರು. ಗಳಿಸಿದ್ದರು.ಪ್ರಭಾಸ್ ಹಾಗೂ ಅಲ್ಲು ಅರ್ಜುನ್ ಅವರ ಬಾಹುಬಲಿ-2 ಹಾಗೂ ಪುಷ್ಪಾ-2 1700 ಕೋಟಿ ರು.ಗಳಿಸಿ 2000 ಕೋಟಿ ರು. ಹತ್ತಿರ ಬಂದಿದ್ದವು.

ಮುಸ್ಲಿಂ ಸ್ತ್ರೀಯರ ಮುಟ್ಟಿದ್ರೆ ಕೈ ಕತ್ತರಿಸುವೆ: ಎಐಎಂಐಎಂ ನಾಯಕ

ಪಿಟಿಐ ಜಾಲ್ನಾ‘ಯಾರಾದರೂ ದುರುದ್ದೇಶದಿಂದ ಮುಸ್ಲಿಂ ಮಹಿಳೆಯರ ಮೈ ಮುಟ್ಟುವುದಕ್ಕೆ ಮುಂದಾದರೆ ನಾನು ಅಂತಹವರ ಕೈ ಕತ್ತರಿಸುತ್ತೇನೆ’ ಎಂದು ಮಾಜಿ ಸಂಸದ, ಮಹಾರಾಷ್ಟ್ರ ಎಐಎಂಐಎಂ ನಾಯಕ ಇಮ್ತಿಯಾಜ್‌ ಜಲೀಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಬಿಹಾರ ಸಿಎಂ ನಿತೀಶ್ ಕುಮಾರ್‌ ಮುಸ್ಲಿಂ ವೈದ್ಯೆಯ ಹಿಜಾಬ್‌ ಎಳೆದಿದ್ದರು. ಇದರ ಬೆನ್ನಲ್ಲೇ ಮುಸ್ಲಿಂ ಮಹಿಳೆಯರ ಬಗ್ಗೆ ಯುಪಿ ಸಚಿವ ಸಂಜಯ್‌ ನಿಷಾದ್‌ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಇದನ್ನು ಸಭೆಯೊಂದರಲ್ಲಿ ಮಾತನಾಡುವಾಗ ಖಂಡಿಸಿದ ಜಲೀಲ್‌ ಈ ರೀತಿ ಹೇಳಿದ್ದಾರೆ.‘ಜಾತ್ಯತೀತ ಪಕ್ಷವೆಂದು ಕರೆಯಲ್ಪಡುವವರು ಗೂಂಡಾಗಳು, ಅಪರಾಧಿಗಳನ್ನು ಬೆಂಬಲಿಸುತ್ತಾರೆ. ಆದರೆ ಮುಸ್ಲಿಮರನ್ನು ಬೆಂಬಲಿಸುವುದಕ್ಕೆ ಹಿಂಜರಿಯುತ್ತಾರೆ. ಉತ್ತರಪ್ರದೇಶದ ಸಚಿವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಯಾರಾದರೂ ಮುಸ್ಲಿಂ ಸಹೋದರಿಯರನ್ನು ಕೆಟ್ಟ ಭಾವನೆಯಿಂದ ಮುಟ್ಟಿದರೆ ನಾನು ಅವರ ಕೈ ಕತ್ತರಿಸುತ್ತೇನೆ’ ಎಂದಿದ್ದಾರೆ.

ಉತ್ತರಪ್ರದೇಶ ಸಚಿವ ಸಂಜಯ್‌ ನಿಷಾದ್, ‘ನಿತೀಶ್‌ ಅವರು ವೈದ್ಯೆಯ ಹಿಜಾಬ್‌ ಬದಲು ಬೇರೆಡೆ ಮುಟ್ಟಿದ್ದರೆ ಏನಾಗ್ತಿತ್ತು?’ ಎಂದಿದ್ದರು.

ಮಹಾ ಸರ್ಕಾರದಲ್ಲಿ ಒಡಕು: ಅಜಿತ್‌-ಬಿಜೆಪಿ ರಾಜ್ಯಾಧ್ಯಕ್ಷ ವಾಕ್ಸಮರ

ಪುಣೆ: ಮಹಾರಾಷ್ಟ್ರ ಸರ್ಕಾರದಲ್ಲಿ ಒಡಕು ಕಾಣಿಸಿಕೊಂಡಿದ್ದು ಡಿಸಿಎಂ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್‌ ಮಧ್ಯೆ ವಾಕ್ಸಮರ ನಡೆದಿದೆ.‘ಪಿಂಪ್ರಿ ಚಿಂಚ್ವಾಡ ಮಹಾನಗರ ಪಾಲಿಕೆ ಕಳೆದ 9 ವರ್ಷಗಳಿಂದ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದೆ. ಅದರಿಂದಾಗಿಯೇ ಸಾಲದ ಸುಳಿಯಲ್ಲಿ ಸಿಲುಕಿದೆ’ ಎಂದು ಅಜಿತ್ ಪವಾರ್ ಹೇಳಿಕೆ ನೀಡಿದ್ದಾರೆ. ವಿಚಿತ್ರವೆಂದರೆ, ಈ ಕ್ಷೇತ್ರದಲ್ಲಿ 2017-22ರ ಅವಧಿಯಲ್ಲಿ ಬಿಜೆಪಿ ಆಡಳಿತ ನಡೆಸಿತ್ತು.

ಪವಾರ್‌ ಹೇಳಿಕೆಗೆ ಬಿಜೆಪಿ ರಾಜ್ಯಾದ್ಯಕ್ಷ ಚವಾಣ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಆರೋಪ ಮಾಡುವ ಮೊದಲು ಅಜಿತ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ಯಾವ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ರೀತಿ ಮಾತನಾಡಿದರೆ ಅವರಿಗೇ ತೊಂದರೆಯಾಗಲಿದೆ’ ಎಂದು ಆಗ್ರಹಿಸಿದ್ದಾರೆ.