ಸಾರಾಂಶ
ರಷ್ಯಾದ ಜೊತೆಗಿನ ಸಂಘರ್ಷ ಅಂತ್ಯಕ್ಕೆ ಅಮೆರಿಕದ ಜೊತೆ ಉಕ್ರೇನ್ ಮಹತ್ವದ ಮಾತುಕತೆ ನಡೆಸುವ ಕೆಲವೇ ಗಂಟೆಗಳ ಮುಂಚೆ ಉಕ್ರೇನ್ ರಷ್ಯಾದ ಮೇಲೆ ಅತಿ ದೊಡ್ಡ ಡ್ರೋನ್ ದಾಳಿಗೆ ನಡೆಸಿದೆ.
ಮಾಸ್ಕೋ: ರಷ್ಯಾದ ಜೊತೆಗಿನ ಸಂಘರ್ಷ ಅಂತ್ಯಕ್ಕೆ ಅಮೆರಿಕದ ಜೊತೆ ಉಕ್ರೇನ್ ಮಹತ್ವದ ಮಾತುಕತೆ ನಡೆಸುವ ಕೆಲವೇ ಗಂಟೆಗಳ ಮುಂಚೆ ಉಕ್ರೇನ್ ರಷ್ಯಾದ ಮೇಲೆ ಅತಿ ದೊಡ್ಡ ಡ್ರೋನ್ ದಾಳಿಗೆ ನಡೆಸಿದೆ. ಇದೇ ಮೊದಲ ಬಾರಿ ರಾಜಧಾನಿ ಮಾಸ್ಕೋ ವಲಯ ಸೇರಿದಂತೆ ನೂರಾರು ಡ್ರೋನ್‌ಗಳನ್ನು ಬಳಸಿ ಉಕ್ರೇನ್ ದಾಳಿ ಮಾಡಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ರಷ್ಯಾ ಸುಮಾರು 10 ಪ್ರದೇಶಗಳಲ್ಲಿ ಉಕ್ರೇನ್‌ನ 337 ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
3 ಗಂಟೆ ಕಾಲ ನಡೆದ ದಾಳಿ ವೇಳೆ 126 ಡ್ರೋನ್‌ಗಳನ್ನು ಉಕ್ರೇನ್‌ನ ಗಡಿಯಾಚೆಗಿನ ಕುರ್ಸ್ಕ್‌ನಲ್ಲಿ ಹಾಗೂ 91 ಡ್ರೋನ್‌ಗಳನ್ನು ಮಾಸ್ಕೋದಲ್ಲಿ ನಾಶ ಮಾಡಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ಉಕ್ರೇನ್ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, 17 ಮಂದಿಗೆ ಗಾಯಗಳಾಗಿವೆ.ರಷ್ಯಾದೊಂದಿಗಿನ 3 ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಸೌದಿ ಅರೇಬಿಯಾದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕರನ್ನು ಭೇಟಿ ಮಾಡಲು ಉಕ್ರೇನ್ ನಿಯೋಗವೊಂದು ತೆರಳಿದ್ದ ವೇಳೆಯೇ ಈ ದಾಳಿ ನಡೆದಿದೆ. ಈ ಘಟನೆ ಬಗ್ಗೆ ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.