ಸಾರಾಂಶ
ಚಾಕು ಇರಿತಕ್ಕೊಳಗಾದ ಸಂದರ್ಭದಲ್ಲಿ ತಮ್ಮನ್ನು ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ನಟ ಸೈಫ್ ಅಲಿ ಖಾನ್ ಭೇಟಿ ಮಾಡಿ ಧನ್ಯವಾದ ಸಮರ್ಪಿಸಿದ್ದಾರೆ.
ಮುಂಬೈ: ಚಾಕು ಇರಿತಕ್ಕೊಳಗಾದ ಸಂದರ್ಭದಲ್ಲಿ ತಮ್ಮನ್ನು ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ನಟ ಸೈಫ್ ಅಲಿ ಖಾನ್ ಭೇಟಿ ಮಾಡಿ ಧನ್ಯವಾದ ಸಮರ್ಪಿಸಿದ್ದಾರೆ.
ಸೈಫ್ ಲೀಲಾವತಿ ಆಸ್ಪತ್ರೆಯಲ್ಲಿರುವಾಗಲೇ ಭಜನ್‌ರನ್ನು ಭೇಟಿ ಮಾಡಿದ್ದರು. ಈಗ ಆ ಫೋಟೋಗಳು ಬಿಡುಗಡೆ ಆಗಿವೆ. ಒಂದು ಚಿತ್ರದಲ್ಲಿ ಚಾಲಕ, ಸೈಫ್ ಪಕ್ಕದಲ್ಲಿ ಕುಳಿತು ಕ್ಯಾಮರಾ ನೋಡಿ ನಗುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟ, ಭಜನ್ ಹೆಗಲ ಮೇಲೆ ಕೈ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಭಜನ್, ‘ಸೈಫ್ ಅವರ ಆಪ್ತ ಸಹಾಯಕನಿಂದ ಕರೆ ಬಂದಿತು. ಮಾಧ್ಯಮಗಳಿರುವ ಕಾರಣ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಭೇಟಿ ಮಾಡಿದೆ. ಅವರ ಜೊತೆ ಕೆಲ ಸೆಲ್ಫಿ, ಫೋಟೋಗಳನ್ನು ತೆಗೆದುಕೊಂಡೆ’ ಎಂದಿದ್ದಾರೆ . ದಾಳಿಯಿಂದ ಗಾಯಗೊಂಡಿದ್ದ ಸೈಫ್‌ರನ್ನು ಭಜನ್ ಜ.16ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು.