ವೆನಿಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋರನ್ನು ಸೆರೆ ಹಿಡಿದ ಘಟನೆ ಬಗ್ಗೆ ಚೀನಾ, ರಷ್ಯಾ ಕಿಡಿಕಾರಿದ್ದರೆ, ಈ ಬೆಳವಣಿಗೆ ಭಾರತದ ಪಾಲಿಗೆ 9000 ಕೋಟಿ ರು. ಮೊತ್ತದ ತೈಲ ವಾಪಸ್‌ ಮತ್ತು ತೈಲ ಖರೀದಿಗೆ ಹೊಸ ಮೂಲವನ್ನು ಸೃಷ್ಟಿಸುವ ಸಾಧ್ಯತೆ ಸೃಷ್ಟಿಸಿದೆ.

ವಾಷಿಂಗ್ಟನ್‌: ವೆನಿಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋರನ್ನು ಸೆರೆ ಹಿಡಿದ ಘಟನೆ ಬಗ್ಗೆ ಚೀನಾ, ರಷ್ಯಾ ಕಿಡಿಕಾರಿದ್ದರೆ, ಈ ಬೆಳವಣಿಗೆ ಭಾರತದ ಪಾಲಿಗೆ 9000 ಕೋಟಿ ರು. ಮೊತ್ತದ ತೈಲ ವಾಪಸ್‌ ಮತ್ತು ತೈಲ ಖರೀದಿಗೆ ಹೊಸ ಮೂಲವನ್ನು ಸೃಷ್ಟಿಸುವ ಸಾಧ್ಯತೆ ಸೃಷ್ಟಿಸಿದೆ.

ಒಎನ್‌ಜಿಸಿ ವಿದೇಶ್‌ ಲಿ. ಭಾರೀ ಹೂಡಿಕೆ

ವಿನಿಜುವೆಲಾದ ಕ್ರಿಸ್ಟೋಬಲ್‌ ತೈಲ ನಿಕ್ಷೇಪಗಳಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ವಿದೇಶ್‌ ಲಿ. ಭಾರೀ ಹೂಡಿಕೆ ಮಾಡಿದೆ. ಆದರೆ ಆ ದೇಶದ ಮೇಲೆ ಅಮೆರಿಕದ ನಿರ್ಭಂದದ ಬಳಿಕ ಭಾರತದ ಕಂಪನಿಗಳಿಗೆ ಹೂಡಿಕೆ ಮೇಲಿನ ಆದಾಯದ ಪಾಲನ್ನು ವೆನಿಜುವೆಲಾ ಸ್ಥಗಿತಗೊಳಿಸಿತ್ತು. ಅದು ಹೆಚ್ಚು ಕಡಿಮೆ 9000 ಕೋಟಿ ರು.ನಷ್ಟಿದೆ. ಇದೀಗ ಅಲ್ಲಿ ಮತ್ತೆ ಹೊಸ ತೈಲ ಬಾವಿಗಳು ತೆರೆದರೆ, ಭಾರತಕ್ಕೆ ಅಷ್ಟು ಹಣ ಇಲ್ಲವೇ, ಆ ಮೊತ್ತದ ತೈಲ ಆಮದಿನ ನಿರೀಕ್ಷೆ ವ್ಯಕ್ತವಾಗಿದೆ.

 ವೆನಿಜುವೆಲಾದಿಂದ ತೈಲ ಖರೀದಿಗೆ ಭಾರತದ ರಿಲಯನ್ಸ್‌ ಅನುಮತಿ ಪಡೆದುಕೊಂಡಿತ್ತು

ಮತ್ತೊಂದೆಡೆ ನಿರ್ಬಂಧದ ಹೊರತಾಗಿಯೂ ವೆನಿಜುವೆಲಾದಿಂದ ತೈಲ ಖರೀದಿಗೆ ಭಾರತದ ರಿಲಯನ್ಸ್‌ ಅನುಮತಿ ಪಡೆದುಕೊಂಡಿತ್ತು. ಆದರೆ ನಾನಾ ಕಾರಣಗಳಿಂದ ಅದು ಕಾರ್ಯಸಾಧುವಾಗಿರಲಿಲ್ಲ. ಆದರೆ ಇದೀಗ ತೈಲ ಬಾವಿಗಳು ಅಮೆರಿಕದ ತೆಕ್ಕೆಗೆ ಬಂದರೆ ರಿಲಯನ್ಸ್‌ ತೈಲ ಖರೀದಿಗೆ ಅವಕಾಶ ಸಿಗಲಿದೆ. ಜೊತೆಗೆ ಮಧ್ಯಪ್ರಾಚ್ಯ ದೇಶಗಳನ್ನು ಹೊರತುಪಡಿಸಿ, ಭಾರತಕ್ಕೆ ತೈಲ ಆಮದಿಗೆ ಹೊಸದೊಂದು ಮೂಲ ಸಿಕ್ಕಿದಂತೆ ಆಗಲಿದೆ.