ಸಾರಾಂಶ
ನನ್ನ ಮತ್ತು ನನ್ನ ಕುಟುಂಬದವರನ್ನು ಕೊಲ್ಲಲೆಂದೇ ಲಾರೆನ್ಸ್ ಬಿಷ್ಣೋಯ್ ತಂಡ ನನ್ನ ಮೇಲೆ ಗುಂಡಿನ ದಾಳಿ ನಡೆಸಿತ್ತು ಎಂದು ನಟ ಸಲ್ಮಾನ್ ಖಾನ್ ಆರೋಪಿಸಿದ್ದಾರೆ.
ಮುಂಬೈ: ನನ್ನ ಮತ್ತು ನನ್ನ ಕುಟುಂಬದವರನ್ನು ಕೊಲ್ಲಲೆಂದೇ ಲಾರೆನ್ಸ್ ಬಿಷ್ಣೋಯ್ ತಂಡ ನನ್ನ ಮೇಲೆ ಗುಂಡಿನ ದಾಳಿ ನಡೆಸಿತ್ತು ಎಂದು ನಟ ಸಲ್ಮಾನ್ ಖಾನ್ ಆರೋಪಿಸಿದ್ದಾರೆ. ದಾಳಿ ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಲ್ಮಾನ್‌ರ ಈ ಹೇಳಿಕೆ ದಾಖಲಾಗಿದೆ. ಕಳೆದ ಏ.14ರಂದು ಬೈಕ್‌ನಲ್ಲಿ ಬಂದ ಇಬ್ಬರು ಮುಂಜಾವು 5 ಗಂಟೆ ವೇಳೆಗೆ ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ದಶಕಗಳ ಹಿಂದೆ ಚಿತ್ರೀಕರಣವೊಂದರ ವೇಳೆ ನಟ ಸಲ್ಮಾನ್ ಕೃಷ್ಣಮೃಗಗಳನ್ನು ಹತ್ಯೆಗೈದ ಆರೋಪ ಹೊತ್ತಿದ್ದಾರೆ. ಹೀಗಾಗಿ ಕೃಷ್ಣಮೃಗಗಳನ್ನು ಆರಾಧಿಸುವ ಬಿಷ್ಣೋಯಿ ಸಮುದಾಯ ಸಲ್ಮಾನ್ ಹತ್ಯೆಗೆ ಹೊಂಚು ಹಾಕಿದೆ.
2024ರ ಹಜ್ ಯಾತ್ರೆಯಲ್ಲಿ 201 ಭಾರತೀಯರು ಸಾವುನವದೆಹಲಿ: 2024ರ ಹಜ್ ಯಾತ್ರೆಯಲ್ಲಿ ಭಾರತೀಯ ಮೂಲದ ಸುಮಾರು 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಬುಧವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದೆ. ಈ ಬಗ್ಗೆ ವಿವರ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ‘2024ರ ಜುಲೈ 21ರ ತನಕದವರೆಗೆ ಹಜ್ ಯಾತ್ರೆಗೆ ತೆರಳಿದ್ದ ಭಾರತೀಯರ ಪೈಕಿ 201 ಜನರು ಮೃತ ಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ಉಸಿರಾಟ ಮತ್ತು ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರ ಪೈಕಿ ಶೇ. 70ರಷ್ಟು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ’ಎಂದಿದ್ದಾರೆ.