ಅಸ್ವಸ್ಥ ಆಪ್ತರೊಬ್ಬರನ್ನು ನೋಡಲು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ತಮ್ಮ ಬೆನ್ನುಬಿದ್ದು ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳಿಗೆ (ಛಾಯಾಗ್ರಾಹಕರಿಗೆ) ನಟ ಸಲ್ಮಾನ್ ಖಾನ್ ಮಂಗಳವಾರ ರಾತ್ರಿ ಬಿಸಿ ಮುಟ್ಟಿಸಿದ್ದಾರೆ.
- ನನ್ನ ನೋವನ್ನು ಕಂಡು ಆನಂದಿಸಿದರೆ ಸುಮ್ಮನಿರಲ್ಲ
- ನೀವು ಈ ಸ್ಥಿತಿಯಲ್ಲಿದ್ರೆ ನಾನೂ ಹೀಗೆ ಮಾಡ್ತೀನಾ?- ನನಗೀಗ 60 ವರ್ಷ, ಆದರೂ ಹೋರಾಟ ಮರೆತಿಲ್ಲಮುಂಬೈ: ಅಸ್ವಸ್ಥ ಆಪ್ತರೊಬ್ಬರನ್ನು ನೋಡಲು ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ತಮ್ಮ ಬೆನ್ನುಬಿದ್ದು ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳಿಗೆ (ಛಾಯಾಗ್ರಾಹಕರಿಗೆ) ನಟ ಸಲ್ಮಾನ್ ಖಾನ್ ಮಂಗಳವಾರ ರಾತ್ರಿ ಬಿಸಿ ಮುಟ್ಟಿಸಿದ್ದಾರೆ.
ಮುಂಬೈನ ಹಿಂದುಜಾ ಆಸ್ಪತ್ರೆಗೆ ಹೊರಟಿದ್ದ ನಟನನ್ನು ಕಂಡ ಪಾಪರಾಜಿಗಳು, ಅವರನ್ನು ಹಿಂದುಜಾ ಆಸ್ಪತ್ರೆಯ ವರೆಗೆ ಹಿಂಬಾಲಿಸಿದ್ದರು. ಇದರಿಂದ ಕೆರಳಿದ ಸಲ್ಮಾನ್, ‘ನಾನು ಯಾವ ಮಾಧ್ಯಮದ ಒಳಿತಿಗಾಗಿ ಇಷ್ಟು ದಿನ ಅವರು ಕೇಳಿದ್ದಕ್ಕೆಲ್ಲಾ ಪ್ರತಿಕ್ರಿಯಿಸುತ್ತಿದ್ದೆನೋ, ಅವರಿಂದು ನನ್ನ ನೋವನ್ನು ಕಂಡು ಆನಂದಿಸಿದರೆ ಸುಮ್ಮನಿರುವುದಿಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಸಮಸ್ಯೆಯಾಗುವುದಾದರೆ 100 ಸಿನಿಮಾಗಳ ತ್ಯಾಗಕ್ಕೂ ಸಿದ್ಧ’ ಎಂದರು.ಜತೆಗೆ, ‘ನಿಮ್ಮ ಕಡೆಯವರ್ಯಾರಾದರೂ ಆಸ್ಪತ್ರೆಯಲ್ಲಿದ್ದಾಗಲೂ ನಾನು ಹೀಗೆ ಮಾಡುವೆನೇ ಎಂದೊಮ್ಮೆ ನೋಡಿ. 60 ವರ್ಷದವ ಆಗಿದ್ದರೂ ಹೋರಾಡುವುದನ್ನು ಮರೆತಿಲ್ಲ. ನನ್ನನ್ನು ಜೈಲಿಗೆ ಹಾಕಿಸುತ್ತೀರಾ’ ಎಂದು ಸವಾಲೆಸೆದರು.
ಗಲ್ವಾನ್ ಸಂಘರ್ಷ ಆಧರಿತ ಮಾತೃಭೂಮಿ ಚಿತ್ರದಲ್ಲಿ ನಟಿಸುತ್ತಿರುವ ಸಲ್ಮಾನ್, ಯಾರನ್ನು ಕಾಣಲು ಆಸ್ಪತ್ರೆಗೆ ಹೋಗಿದ್ದರೆಂಬುದು ಸ್ಪಷ್ಟವಿಲ್ಲ.