36 ವರ್ಷ ಬಳಿಕ ಬ್ರಿಟಿಷ್‌-ಇಂಡಿಯಾ ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರ ‘ದ ಸಟಾನಿಕ್‌ ವರ್ಸೆಸ್‌’ ಪುಸ್ತಕ ಸೇಲ್‌

| Published : Dec 26 2024, 01:05 AM IST / Updated: Dec 26 2024, 04:26 AM IST

36 ವರ್ಷ ಬಳಿಕ ಬ್ರಿಟಿಷ್‌-ಇಂಡಿಯಾ ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರ ‘ದ ಸಟಾನಿಕ್‌ ವರ್ಸೆಸ್‌’ ಪುಸ್ತಕ ಸೇಲ್‌
Share this Article
  • FB
  • TW
  • Linkdin
  • Email

ಸಾರಾಂಶ

ದಿ.ಪ್ರಧಾನಿ ರಾಜೀವ್‌ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ನಿಷೇಧಗೊಂಡಿದ್ದ ಬ್ರಿಟಿಷ್‌-ಇಂಡಿಯಾ ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರ ‘ದ ಸಟಾನಿಕ್‌ ವರ್ಸೆಸ್‌’ ಪುಸ್ತಕ 36 ವರ್ಷಗಳ ನಂತರ ಸದ್ದಿಲ್ಲದೆ ಭಾರತಕ್ಕೆ ಮರಳಿದೆ.

ನವದೆಹಲಿ: ದಿ.ಪ್ರಧಾನಿ ರಾಜೀವ್‌ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ನಿಷೇಧಗೊಂಡಿದ್ದ ಬ್ರಿಟಿಷ್‌-ಇಂಡಿಯಾ ಕಾದಂಬರಿಕಾರ ಸಲ್ಮಾನ್‌ ರಶ್ದಿ ಅವರ ‘ದ ಸಟಾನಿಕ್‌ ವರ್ಸೆಸ್‌’ ಪುಸ್ತಕ 36 ವರ್ಷಗಳ ನಂತರ ಸದ್ದಿಲ್ಲದೆ ಭಾರತಕ್ಕೆ ಮರಳಿದೆ.

‘ದೆಹಲಿಯಲ್ಲಿ ಕೆಲವು ದಿನಗಳಿಂದ ಪುಸ್ತಕ ಬಿಕರಿಯಾಗುತ್ತಿದ್ದು, ಪುಸ್ತಕ ಸದ್ಯ ಕಡಿಮೆ ದಾಸ್ತಾನು ಹೊಂದಿದೆ. ಪುಸ್ತಕದ ಬಗ್ಗೆ ಓದುಗರ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು, ಮಾರಾಟ ಉತ್ತಮವಾಗಿರಲಿದೆ’ ಎಂದು ಬಹ್ರಿಸನ್ಸ್ ಪುಸ್ತಕ ಮಾರಾಟಗಾರರ ಮಾಲೀಕ ರಜನಿ ಮಲ್ಹೋತ್ರಾ ಪಿಟಿಐಗೆ ತಿಳಿಸಿದ್ದಾರೆ.

ನಿಷೇಧ ಏಕೆ?: ಪುಸ್ತಕ ಧರ್ಮ ದೂಷಣೆಯಿಂದ ಕೂಡಿದೆ ಎಂದು ಪುಸ್ತಕ ಮತ್ತು ಲೇಖಕ ಸಲ್ಮಾನ್‌ ವಿರುದ್ಧ ಮುಸ್ಲಿಂ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಪುಸ್ತಕವನ್ನು ನಿಷೇಧಿಸಲಾಗಿತ್ತು.

ನಿಷೇಧ ರದ್ದು: ಪುಸ್ತಕ ಆಮದು ನಿಷೇಧ ರದ್ದು ಪ್ರಶ್ನಿಸಿದ್ದ ಅರ್ಜಿಯೊಂದನ್ನು ಇತ್ತೀಚೆಗೆ ದೆಹಲಿ ಹೈಕೋರ್ಟ್‌ ವಜಾಗೊಳಿಸಿತ್ತು. ಪುಸ್ತಕ ನಿಷೇಧಿಸುವ ಆದೇಶದ ಪ್ರತಿ ಹಾಜರಿಗೆ ಅಧಿಕಾರಿಗಳು ವಿಫಲರಾದ ಬೆನ್ನಲ್ಲೇ, ಅಂಥ ಯಾವುದೇ ನಿಷೇಧ ಇಲ್ಲ ಎಂದು ಹೈಕೋರ್ಟ್‌ ತೀರ್ಪು ನೀಡಿತ್ತು.