ಸಾರಾಂಶ
2024ರಲ್ಲಿ ತಮ್ಮ ಬಹುಕಾಲದ ಗೆಳೆಯ ಆಲಿವರ್ ಮುಲ್ಹೆರಿನ್ ಅವರನ್ನು ವಿವಾಹವಾಗಿ ಗಮನ ಸೆಳೆದಿದ್ದ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಫೆಬ್ರವರಿಯಲ್ಲಿ ಮಗುವನ್ನು ದತ್ತು ಪಡೆದಿದ್ದರು. ಇದೀಗ ಮಗುವಿಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ಸ್ಥಾಪಿಸಿರುವ ಕ್ರೆಡೆಲ್‌ವೈಸ್ ಎಂಬ ಕಂಪನಿಯಿಂದ ಸ್ಮಾರ್ಟ್ ತೊಟ್ಟಿಲನ್ನು ಖರೀದಿಸಿದ್ದಾರೆ.
ಬೆಂಗಳೂರು ಮಹಿಳೆಯ ಸ್ಟಾರ್ಟಪ್‌ನಿಂದ ಖರೀದಿ
ಒಂದು ತೊಟ್ಟಿಲ ಬೆಲೆ ಸುಮಾರು 1.5 ಲಕ್ಷ ರು.==ವಾಷಿಂಗ್ಟನ್: 2024ರಲ್ಲಿ ತಮ್ಮ ಬಹುಕಾಲದ ಗೆಳೆಯ ಆಲಿವರ್ ಮುಲ್ಹೆರಿನ್ ಅವರನ್ನು ವಿವಾಹವಾಗಿ ಗಮನ ಸೆಳೆದಿದ್ದ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಫೆಬ್ರವರಿಯಲ್ಲಿ ಮಗುವನ್ನು ದತ್ತು ಪಡೆದಿದ್ದರು. ಇದೀಗ ಮಗುವಿಗೆ ಬೆಂಗಳೂರು ಮೂಲದ ಮಹಿಳೆಯೊಬ್ಬರು ಸ್ಥಾಪಿಸಿರುವ ಕ್ರೆಡೆಲ್‌ವೈಸ್ ಎಂಬ ಕಂಪನಿಯಿಂದ ಸ್ಮಾರ್ಟ್ ತೊಟ್ಟಿಲನ್ನು ಖರೀದಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ತಿಳಿಸಿರುವ ಅವರು, ‘ಎಲ್ಲಾ ಪೋಷಕರು ಈ ಕಂಪನಿಯಿಂದಲೇ ತೊಟ್ಟಿಲನ್ನು ಖರೀದಿಸಿ’ ಎಂದು ಸಲಹೆ ನೀಡಿದ್ದಾರೆ.
ಆಲ್ಟ್‌ಮನ್ ಮಾತಿಗೆ ಸಂತಸ ವ್ಯಕ್ತಪಡಿಸಿದ ಕ್ರೇಡಲ್‌ವೈಸ್ ಸಂಸ್ಥಾಪಕಿ ರಾಧಿಕಾ ಪಾಟೀಲ್ ‘ನಮ್ಮನ್ನು ಪ್ರೀತಿಸುತ್ತಿರುವುದಕ್ಕೆ ಆಲ್ಟ್‌ಮನ್ ಅವರಿಗೆ ಧನ್ಯವಾದಗಳು. ಎಐ ದೇವರು ಕ್ರೇಡಲ್‌ವೈಸ್ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ಆಭಾರಿಯಾಗಿದ್ದೇವೆ. ನಿಮ್ಮೆಲ್ಲರಿಗೆ ಇನ್ನಷ್ಟು ಶುಭ ಹಾರೈಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.ಕ್ರೇಡಲ್‌ವೈಸ್ ವಿಶೇಷತೆ:
ಬೆಂಗಳೂರು ಮೂಲದ, ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ರಾಧಿಕಾ ಪಾಟೀಲ್ ಈ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರಕಾರ, ಕ್ರೆಡೆಲ್‌ವೈಸ್ ಎಂಬುದು ಅಮೆರಿಕನ್ ಸಂಸ್ಥೆಯಾದ ಎಸ್‌ಒಎಸ್‌ವಿನಿಂದ ಹಣಕಾಸು ನೆರವು ಪಡೆದ ಡಿಟಿಸಿ (ನೇರವಾಗಿ ಗ್ರಾಹಕರಿಗೆ) ಬ್ರ್ಯಾಂಡ್ ಆಗಿದೆ. ಇದು ಮಗುವಿನ ನಿದ್ರೆಯ ಮಾದರಿ, ಮಗು ಎಚ್ಚರಗೊಳ್ಳುವ ಸೂಚನೆ ಮತ್ತು ಹಿತವಾದ ಸಂಗೀತದೊಂದಿಗೆ ಮಗು ನಿದ್ರಿಸುವಂತೆ ಮಾಡುವ ವ್ಯವಸ್ಥೆ ಹೊಂದಿರುವ ಸ್ಮಾರ್ಟ್ ತೊಟ್ಟಿಲನ್ನು ತಯಾರಿಸುತ್ತದೆ. ಈ ಕಂಪನಿಯ ಒಂದು ತೊಟ್ಟಿಲಿನ ಬೆಲೆ ಸುಮಾರು 1.5 ಲಕ್ಷ ರು.