ಚಿತ್ರ ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ಸೋಮವಾರ ಕೊಯಮತ್ತೂರಿನ ಈಶ ಫೌಂಡೇಶನ್‌ನಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ನಟಿ ಸಮಂತಾ 2017ರಲ್ಲಿ ನಟ ನಾಗ ಚೈತನ್ಯರೊಡನೆ ವಿವಾಹವಾಗಿ 2021ರಲ್ಲಿ ವಿಚ್ಛೇದನ ಪಡೆದಿದ್ದರು.
ಕೊಯಮತ್ತೂರು: ಚಿತ್ರ ನಿರ್ದೇಶಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ಸೋಮವಾರ ಕೊಯಮತ್ತೂರಿನ ಈಶ ಫೌಂಡೇಶನ್‌ನಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.
ನಟಿ ಸಮಂತಾ 2017ರಲ್ಲಿ ನಟ ನಾಗ ಚೈತನ್ಯರೊಡನೆ ವಿವಾಹವಾಗಿ 2021ರಲ್ಲಿ ವಿಚ್ಛೇದನ ಪಡೆದಿದ್ದರು. ರಾಜ್‌ಗೆ ಕೂಡ ಇದು 2ನೇ ಮದುವೆ. ಕಳೆದ 1 ವರ್ಷದ ಹಿಂದೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು.
ಇನ್‌ಸ್ಟಾಗ್ರಾಂನಲ್ಲಿ ವಿವಾಹದ ವಿವಿಧ ಚಿತ್ರ
ಈ ಬಗ್ಗೆ ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿವಾಹದ ವಿವಿಧ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ‘01.12.2025’ ಎಂದು ಅಡಿ ಬರಹ ಬರೆದಿದ್ದಾರೆ.
ವಿವಾಹ ಸಮಾರಂಭದಲ್ಲಿ ಸಮಂತಾ, ಕಡುಕಂದು ಬಣ್ಣ ಜರಿ ಹೊಂದಿದ್ದ ಸೀರೆ, ಅದಕ್ಕೆ ಸರಿಹೊಂದುವ ಚಿನ್ನದ ಆಭರಣಗಳನ್ನು ಧರಿಸಿದ್ದರು. ಬಿಳಿ ಕುರ್ತಾ, ತಿಳಿ ಗುಲಾಬಿ ಬಣ್ಣದ ಸ್ಲೀವ್‌ಲೆಸ್ ಬ್ಲೇಸರ್ ಅನ್ನು ರಾಜ್ ಧರಿಸಿದ್ದರು.
ಈಶ ಫೌಂಡೇಶನ್ ಅಭಿನಂದನೆ:
‘ಸಮಂತಾ ಮತ್ತು ರಾಜ್‌ರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರಿಗೆ ದೇವಿಯ ಅಸೀಮ ಅನುಗ್ರಹ ಮತ್ತು ಹರ್ಷೋಲ್ಲಾಸದಿಂದ ಆಶೀರ್ವದಿಸಲ್ಪಟ್ಟ ದಾಂಪತ್ಯವನ್ನು ಹಾರೈಸುತ್ತೇವೆ’ ಎಂದು ಈಶ ಫೌಂಡೇಶನ್ ಹೇಳದೆ.
