ಸದಾ ತಮ್ಮ ವಿವಾದಿತ ಹೇಳಿಕೆಗಳು ಹಾಗೂ ನಿಲುವಿನ ಮೂಲಕ ಸುದ್ದಿ ಆಗುತ್ತಿದ್ದ ಸಮಾಜವಾದಿ ಪಕ್ಷದ ಸಂಸದ ಶಫೀಕ್‌ ಉರ್‌ ರೆಹಮಾನ್‌ ಬರ್ಕ್‌ (93) ಮಂಗಳವಾರ ನಿಧನರಾದರು.

ಲಖನೌ: ಸದಾ ತಮ್ಮ ವಿವಾದಿತ ಹೇಳಿಕೆಗಳು ಹಾಗೂ ನಿಲುವಿನ ಮೂಲಕ ಸುದ್ದಿ ಆಗುತ್ತಿದ್ದ ಸಮಾಜವಾದಿ ಪಕ್ಷದ ಸಂಸದ ಶಫೀಕ್‌ ಉರ್‌ ರೆಹಮಾನ್‌ ಬರ್ಕ್‌ (93) ಮಂಗಳವಾರ ನಿಧನರಾದರು. ದೀರ್ಘಕಾಲೀನ ಅಸ್ವಾಸ್ಥ್ಯದ ಕಾರಣ ಅವರನ್ನು ಮೊರಾದಾಬಾದ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲೇ ಅವರು ಕೊನೆಯುಸಿರೆಳೆದರು.

ಬರ್ಕ್‌ ಅಯೋಧ್ಯೆ ಬಾಬ್ರಿ ಮಸೀದಿ ಮಂಡಳಿಯಲ್ಲಿದ್ದು, ರಾಮಮಂದಿರ ನಿರ್ಮಾಣ ವಿರೋಧಿ ನಿಲುವು ಹೊಂದಿದ್ದರು. ಅಲ್ಲದೆ, ವಂದೇಮಾತರಂ ಇಸ್ಲಾಂ ವಿರೋಧಿ ಎಂಬ ಹೇಳಿಕೆ ನೀಡಿದ್ದರು. ತಾಲಿಬಾನ್‌ ಉಗ್ರರ ಕಾಳಗವನ್ನು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋಲಿಸಿ ವಿವಾದಕ್ಕೀಡಾಗಿದ್ದರು.