ಸಂಭಲ್‌ನಲ್ಲಿ ಹಿಂದೂ ಜನ ಸಂಖ್ಯೆ ಶೇ.50 ಕುಸಿತ: ಬಿಜೆಪಿ ಕಿಡಿ

| N/A | Published : Aug 29 2025, 01:00 AM IST

ಸಾರಾಂಶ

ಕಳೆದ ವರ್ಷ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಸಂಭಲ್ ಘಟನೆ ತನಿಖೆಗೆ ರಚನೆಯಾಗಿದ್ದ ನ್ಯಾಯಾಂಗ ಸಮಿತಿಯು ತನ್ನ ರಹಸ್ಯ ವರದಿ ಸಲ್ಲಿಸಿದೆ.

ಸಂಭಲ್‌/ ಲಖನೌ: ಕಳೆದ ವರ್ಷ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಸಂಭಲ್ ಘಟನೆ ತನಿಖೆಗೆ ರಚನೆಯಾಗಿದ್ದ ನ್ಯಾಯಾಂಗ ಸಮಿತಿಯು ತನ್ನ ರಹಸ್ಯ ವರದಿ ಸಲ್ಲಿಸಿದೆ.

ವರದಿಯಲ್ಲಿ ಸ್ವಾತಂತ್ರ್ಯದ ಬಳಿಕ ಸಂಭಲ್‌ನಲ್ಲಿ ಜನಸಂಖ್ಯಾಶಾಸ್ತ್ರದಲ್ಲಿ ಭಾರೀ ಬದಲಾವಣೆಯಾಗಿದೆ. ಹಿಂದೂಗಳ ಜನಸಂಖ್ಯೆ ಶೇ.50ಕ್ಕಿಂತಲೂ ಹೆಚ್ಚು ಕುಸಿದಿದೆ. 1948ರಲ್ಲಿ ಶೇ.50ರಷ್ಟಿದ್ದ ಹಿಂದೂಗಳ ಸಂಖ್ಯೆ ಇದೀಗ ಶೇ.15-18ಕ್ಕೆ ಕುಸಿದಿದೆ. ಜೊತೆಗೆ ಇದೀಗ ಸಂಭಲ್‌ ಉಗ್ರರ ಹೊಸ ತಾಣವಾಗಿ ಹೊರಹೊಮ್ಮಿದೆ ಎಂಬ ಸ್ಫೋಟಕ ಅಂಶಗಳನ್ನು ಒಳಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಜೆಪಿ ಆರೋಪಿಸಿದೆ.

ಆದರೆ ಬಿಜೆಪಿ ಈ ಆರೋಪಕ್ಕೆ ಕಾಂಗ್ರೆಸ್‌, ಸಮಾಜವಾದಿ ಪಕ್ಷ ತಿರುಗೇಟು ನೀಡಿದ್ದು, ‘ ರಹಸ್ಯ ವರದಿಗಳು ಬಹಿರಂಗವಾಗಿದ್ಹೇಗೆ? ಬಿಜೆಪಿ ನಾಯಕರಿಗೆ ಅದು ಹೇಗೆ ಸಿಕ್ಕಿತು?’ ಎಂದು ಪ್ರಶ್ನಿಸಿದ್ದಾರೆ.

Read more Articles on