ಸಾರಾಂಶ
ಕರಾವಳಿಯಲ್ಲಿ ಕೋಮುವಾದ ನಿಗ್ರಹ ವಿಶೇಷ ಪಡೆಯನ್ನು ಸರ್ಕಾರ ರಚಿಸಿ, ಅದನ್ನು ಹಿಂದುಗಳ ವಿರುದ್ಧ ಮಾತ್ರ ಬಳಸಲಾಗುತ್ತಿದೆ. ಗೋವು ಕಳ್ಳತನ, ಗೋಹತ್ಯೆ, ಲವ್ ಜಿಹಾದ್ ಗಳನ್ನು ಈ ಪಡೆಯ ಮೂಲಕ ತಡೆಯಿರಿ, ಆಗ ಕರಾವಳಿಯಲ್ಲಿ ಸೌಹಾರ್ದತೆ ತನ್ನಿಂತಾನೇ ಮೂಡುತ್ತದೆ ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ ಸುನೀಲ್ ಕೆ.ಆರ್. ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಕರಾವಳಿಯ ಜಿಲ್ಲೆಗಳನ್ನು ಕೋಮು ಗಲಭೆ ಪೀಡಿತ ಪ್ರದೇಶವೆಂದು ಬಿಂಬಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕ ಸುನೀಲ್ ಕೆ.ಆರ್. ಆರೋಪಿಸಿದ್ದಾರೆ.ಸೋಮವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಹಿಂದು ಕಾರ್ಯಕರ್ತರ ಮೇಲಿನ ದೌರ್ಜನ್ಯದ ವಿರುದ್ಧ ಹಿಂದು ಜಾಗರಣ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಕರಾವಳಿಯಲ್ಲಿ ಕೋಮುವಾದ ನಿಗ್ರಹ ವಿಶೇಷ ಪಡೆಯನ್ನು ಸರ್ಕಾರ ರಚಿಸಿ, ಅದನ್ನು ಹಿಂದುಗಳ ವಿರುದ್ಧ ಮಾತ್ರ ಬಳಸಲಾಗುತ್ತಿದೆ. ಗೋವು ಕಳ್ಳತನ, ಗೋಹತ್ಯೆ, ಲವ್ ಜಿಹಾದ್ ಗಳನ್ನು ಈ ಪಡೆಯ ಮೂಲಕ ತಡೆಯಿರಿ, ಆಗ ಕರಾವಳಿಯಲ್ಲಿ ಸೌಹಾರ್ದತೆ ತನ್ನಿಂತಾನೇ ಮೂಡುತ್ತದೆ ಎಂದವರು ಹೇಳಿದರು.
ವೇದಿಕೆಯ ಮುಖಂಡ ಸತೀಶ್ ಪೂಜಾರಿ ಮತ್ತನೇಕ ಹಿಂದು ಮುಖಂಡರ ಮೇಲೆ ನಿರ್ಬಂಧ ಹೇರಿರುವುದು, ಹಿಂದಗಳ ಮೇಲೆ - ಹಿಂದುತ್ವದ ಮೇಲಿನ ದಾಳಿಯನ್ನು ಮಾತನಾಡದಂತೆ ತಡೆಯುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದವರು ಹೇಳಿದರು.ಪ್ರತಿಭಟನೆಯಲ್ಲಿ ಹಿಂದೂ ಮುಖಂಡರಾದ ವಾಸುದೇವ ಗಂಗೊಳ್ಳಿ, ಮಹೇಶ್ ಬೈಲೂರು, ಮಧುಕರ ಮುದ್ರಾಡಿ, ದಿನೇಶ್ ಮೆಂಡನ್, ಶಾಸಕರಾದ ಗುರುರಾಜ ಗಂಟಿಹೊಳೆ, ಸುರೇಶ್ ಶೆಟ್ಟಿ, ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಪಕ್ಷದ ಪ್ರಮುಖರಾದ ರೇಷ್ಮಾ ಉದಯ ಶೆಟ್ಟಿ, ಶಿಲ್ಪಾ ಸುವರ್ಣ, ಶಶಾಂಕ್ ಶಿವತ್ತಾಯ, ರಾಜೇಶ್ ಕಾವೇರಿ, ಸಂಧ್ಯಾ ರಮೇಶ್, ಶ್ರೀಕಾಂತ್ ನಾಯಕ್ ಮಂತಾದ ಪ್ರಮುಖರು ಇದ್ದರು.