ಸಾರಾಂಶ
ಹುಲಿ ಬೇಟೆಯಾಡಿ ಅದರ ಹಲ್ಲನ್ನು ಕುತ್ತಿಗೆಯಲ್ಲಿ ಧರಿಸಿದ್ದಕ್ಕೆ ವಿವಾದವಾಗಿದೆ.
ಮುಂಬೈ: 1987ರಲ್ಲಿ ಹುಲಿ ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ಜೊತೆಗೆ ಸಂಜಯ್ ಧರಿಸಿದ್ದ ಹುಲಿ ಹಲ್ಲನ್ನು ವಶಪಡಿಸಿಕೊಂಡಿದೆ. ಕೆಲ ದಿನಗಳ ಹಿಂದೆ ಸಂಜಯ್ ಸಾಮಾಜಿಕ ಜಾಲತಾಣದ ವಿಡಿಯೋವೊಂದರಲ್ಲಿ ತಾವು 1987 ಹುಲಿ ಬೇಟೆಯಾಡಿದ್ದಾಗಿ ಹೇಳಿದ್ದರು.
ಈ ವಿಡಿಯೋ ಆಧಾರದ ಮೇಲೆ ಸಂಜಯ್ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಅವರ ಮನೆಗೆ ಭೇಟಿ ನೀಡಿ ಹುಲಿ ಹಲ್ಲನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ.