ನಿಮ್ಮ ಪೋಷಕರು ನನಗೆ ಮತ ನೀಡಲು ನಿರಾಕರಿಸಿದರೆ ಎರಡು ದಿನ ಉಪವಾಸ ಸತ್ಯಾಗ್ರಹ ನಡೆಸಿ ಎಂದು ಮಕ್ಕಳೀಗೆ ಬೋಧಿಸುವ ಮೂಲಕ ಮಹಾ ಶಾಸಕ ಸಂತೋಷ್‌ ಬಂಗಾರ್ ವಿವಾದ ಸೃಷ್ಟಿಸಿದ್ದಾರೆ.

ಮುಂಬೈ: ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ತನಗೆ ಮತ ಹಾಕದಿದ್ದರೆ ಎರಡು ದಿನ ಉಪವಾಸವಿರಿ ಎಂದು ಶಾಲಾ ಮಕ್ಕಳಿಗೆ ಅಜಿತ್‌ ಪವಾರ್‌ ಬಣದ ಶಿವಸೇನೆ ಶಾಸಕ ಸಂತೋಷ್‌ ಬಂಗಾರ್‌ ಸಲಹೆ ನೀಡಿದ್ದಾರೆ.

ಹಿಂಗೋಲಿಯ ಶಾಲಾ ಮಕ್ಕಳಿಗೆ ಸಂತೋಷ್‌ ಇಂಥದ್ದೊಂದು ಸಲಹೆ ನೀಡಿದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಂಗಾರ್‌ ಹೇಳಿಕೆ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಎನ್‌ಸಿಪಿ ಒತ್ತಾಯಿಸಿದೆ.

ಇದಕ್ಕೂ ಮೊದಲು ಸಂಜಯ್‌ ಬಂಗಾರ್, ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗದಿದ್ದರೆ ನೇಣು ಬಿಗಿದುಕೊಳ್ಳುತ್ತೇನೆ ಎಂದಿದ್ದರು.