ಸಾರಾಂಶ
ನವದೆಹಲಿ: ಕಳೆದ ತಿಂಗಳು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರದ ತೀವ್ರತೆ ಎಷ್ಟಿತ್ತು ಎಂಬುದನ್ನು ತೋರಿಸುವ ಮತ್ತಷ್ಟು ಚಿತ್ರಗಳು ಬಹಿರಂಗವಾಗಿವೆ. ಮ್ಯಾಕ್ಸಾರ್ ಸಂಸ್ಥೆ ಸೆರೆಹಿಡಿದಿರುವ ಉಪಗ್ರಹ ಚಿತ್ರಗಳಲ್ಲಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮುಝಾಫರಾಬಾದ್‌ನ ಸೈಯದ್ನಾ ಬಿಲಾಲ್ ಉಗ್ರನೆಲೆ ಮತ್ತು ಕೋಟ್ಲಿ-ಗುಲ್ಪುರ ಕ್ಯಾಂಪ್‌ಗಳು ದಾಳಿಯಿಂದ ಛಿದ್ರವಾಗಿರುವುದು ಕಂಡುಬಂದಿವೆ.
ಅವುಗಳ ಮೇಲೆ ನಿಖರ ದಾಳಿ ನಡೆಸಲಾಗಿದ್ದು, ಇದಕ್ಕೆ ಡ್ರೋನ್‌ಗಳನ್ನು ಬಳಸಲಾಗಿತ್ತು ಎನ್ನಲಾಗಿದೆ. ಜೈಷ್ ಸಂಘಟನೆಗೆ ಸೇರಿದ್ದ ಬಿಲಾಲ್ ಕ್ಯಾಂಪ್‌ನಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ನಿರ್ವಹಣೆ, ಕಾಡಿನಲ್ಲಿ ಕಾರ್ಯನಿರ್ವಹಿಸುವುದು ಇತ್ಯಾದಿಗಳನ್ನು ಕಲಿಸಲಾಗುತ್ತಿತ್ತು. ಅತ್ತ ಕೋಟ್ಲಿಯ ಜೈಷ್ ಕ್ಯಾಂಪ್‌ನಲ್ಲಿ ರಜೌರಿ ಮತ್ತು ಪೂಂಚ್ ದಾಳಿಗಳ ಸಿದ್ಧತೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಈ ಚಿತ್ರಗಳಿಂದ ಪಾಕಿಸ್ತಾನದ ಉಗ್ರರಿಗೆ ಆಗಿರುವ ಅಪಾರ ಹಾನಿಯ ಪ್ರಮಾಣ ಮತ್ತು ತೀವ್ರತೆ ಬಯಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ, ಭಾರತದ ನಿಖರ ದಾಳಿಯ ಸಾಮರ್ಥ್ಯದ ಅನಾವರಣವೂ ಆಗಿದೆ.
ಸಿಂದೂರ ವೇಳೆ ಹಾನಿಗೆ ಒಳಗಾಗಿದ್ದ ಜೈಷ್ ಈಜುಕೊಳ ಪುನಾರಂಭ
ಇಸ್ಲಾಮಾಬಾದ್: ಇತ್ತೀಚೆಗೆ ಆಪರೇಷನ್ ಸಿಂದೂರದಲ್ಲಿ ಭಾರತವು ಜೈಷ್ ಎ ಮೊಹಮ್ಮದ್ ಉಗ್ರರ ತಾಣವಾದ ಬಹಾಲ್ಪುರದ ಉಗ್ರ ತರಬೇತಿ ಶಿಬಿರವನ್ನು ನಾಶ ಮಾಡಿತ್ತು. ಆದರೆ ಒಂದು ತಿಂಗಳಲ್ಲೇ ಈ ಉಗ್ರರ ಶಿಬಿರ ನಿಧಾನವಾಗಿ ತಲೆಯೆತ್ತುತ್ತಿದ್ದು, ಇದರ ಅಂಗವಾದ ಈಜುಕೊಳ ಪುನಾರಂಭವಾಗಿದೆ.ಈ ಈಜುಕೊಳದಲ್ಲಿ ಈಗ ಉಗ್ರರಿಗೆ ತರಬೇತಿ ನೀಡುವಿಕೆ ಪುನಾರಂಭವಾಗಿದೆ. ಉಗ್ರರು ಕಾಶ್ಮೀರಕ್ಕೆ ತೆರಳುವ ಮುನ್ನ ಇಲ್ಲಿ ಈಜು ತರಬೇತಿ ಪಡೆದು ಪಾಸಾಗುವುದು ಕಡ್ಡಾಯವಾಗಿದೆ.
2019ರಲ್ಲಿ ಭಾರತದ ಪುಲ್ವಾಮಾದಲ್ಲಿ 40 ಯೋಧರ ಕೊಂದು ಹಾಕಿದ್ದ ಉಗ್ರರದ ಮೊಹಮ್ಮದ್ ಉಮರ್ ಫಾರೂಕ್, ತಲ್ಹಾ ರಶೀದ್ ಅಲ್ವಿ, ಮೊಹಮ್ಮದ್ ಇಸ್ಮಾಯಿಲ್ ಅಲ್ವಿ ಮತ್ತು ರಶೀದ್ ಬಿಲ್ಲಾ ಅವರು ಕಾಶ್ಮೀರಕ್ಕೆ ತೆರಳುವ ಮೊದಲುದಿದೇ ಕೊಳದಲ್ಲಿ ತಮ್ಮ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು.