ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಮುಂದಿನ 5 ವರ್ಷಗಳ ಕಾಲ ಯಾವುದೇ ವಾಣಿಜ್ಯ ಅಥವಾ ವಸತಿ ಪ್ರದೇಶಗಳ ಬಾಡಿಗೆಯನ್ನು ಹೆಚ್ಚಳ ಮಾಡುವಂತಿಲ್ಲ ಎಂದು ದೊರೆ ಆದೇಶಿಸಿದ್ದಾರೆ.

ರಿಯಾದ್‌: ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಮುಂದಿನ 5 ವರ್ಷಗಳ ಕಾಲ ಯಾವುದೇ ವಾಣಿಜ್ಯ ಅಥವಾ ವಸತಿ ಪ್ರದೇಶಗಳ ಬಾಡಿಗೆಯನ್ನು ಹೆಚ್ಚಳ ಮಾಡುವಂತಿಲ್ಲ ಎಂದು ದೊರೆ ಆದೇಶಿಸಿದ್ದಾರೆ. ಕೊರೋನಾ ಸಾಂಕ್ರಾಮಿಕದ ಬಳಿಕ ದೇಶದಲ್ಲಿ, ಅದರಲ್ಲೂ ರಾಜಧಾನಿ ರಿಯಾದ್‌ನಲ್ಲಿ ಬಾಡಿಗೆ ಪ್ರಮಾಣ ಭಾರೀ ಏರಿಕೆ ಕಂಡಿತ್ತು. ದೇಶವು ಹೊಸ ಹೊಸ ಅಭಿವೃದ್ಧಿ ಯೋಜನೆ ಜಾರಿಗೆ ಹೆಜ್ಜೆ ಹಾಕಿರುವಾಗಲೇ ಬಾಡಿಗೆ ಮೊತ್ತ ಭಾರೀ ಏರಿಕೆಯಾಗಿತ್ತು. ಹೀಗಾಗಿ ಬಾಡಿಗೆಯಲ್ಲಿ ಸಮತೋಲನ, ಪಾರದರ್ಶಕತೆ ಮತ್ತು ನ್ಯಾಯಸಮ್ಮತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಬ್ರೇಕ್‌ ಹಾಕಲಾಗಿದೆ.

ಹೀಗಾಗಿ ಈ ಬೆಳವಣಿಗೆ ದರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂದಿನ 5 ವರ್ಷ ಬಾಡಿಗೆ ಏರಿಸುವಂತಿಲ್ಲ. ಒಂದು ವೇಳೆ ಏರಿಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬಾಡಿಗೆದಾರರಿಗೆ ಒಂದು ವರ್ಷದ ಬಾಡಿಗೆಯ ದಂಡ ಮತ್ತು ಹೆಚ್ಚುವರಿ ಪರಿಹಾರ ನೀಡಬೇಕಾಗುತ್ತದೆ. ಇನ್ನು ಈ ಅಕ್ರಮ ಬಯಲಿಗೆಳೆಯುವವರಿಗೆ ದಂಡದ ಶೇ.20ರಷ್ಟು ಪಾವತಿಯಾಗಲಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ರಿಯಾದ್‌ನಲ್ಲಿ ಜಾರಿಯಾಗಿರುವ ಕಾನೂನು ಶೀಘ್ರವೇ ದೇಶವ್ಯಾಪಿ ವಿಸ್ತರಣೆಯಾಗಲಿದೆ.