ಸಾರಾಂಶ
ಮೀನುಗಾರಿಕೆ ಸಹಕಾರ ಸಂಘದಲ್ಲಿ. ಯುವಕ ಯುವತಿಯರು. ಉದ್ಯೋಗ ಸೃಷ್ಟಿಸಿಕೊಳ್ಳಲು. ನಮ್ಮ ಇಲಾಖೆಯಿಂದ ಬಾಡಿಗೆ ವಾಹನವನ್ನುತಾಲೂಕಿನಲ್ಲಿ ಮೊಟ್ಟ ಮೊದಲಿಗೆ ಈ ಸಂಘಕ್ಕೆ ನೀಡುತ್ತಿದ್ದೇವೆ
ಕನ್ನಡಪ್ರಭ ವಾರ್ತೆ ಸುತ್ತೂರುನಂಜನಗೂಡು ತಾಲೂಕು ಹದಿನಾರು ಮೋಳೆ ಗ್ರಾಮದ ಮೀನುಗಾರರ ಸಹಕಾರ ಸಂಘಕ್ಕೆ ತಾಲೂಕಿನ ಮೀನು ಇಲಾಖೆ ವತಿಯಿಂದ ಮೀನು ಮಾರಾಟ ಸಂಘಕ್ಕೆ ವಿದ್ಯುತ್ ಚಾಲಿತ ಬಾಡಿಗೆ ಆಧಾರಿತ ವಾಹನವನ್ನು ಅಧಿಕಾರಿ ಪ್ರಸಾದ್ ನೀಡಿದರು.ಬಳಿಕ ಮಾತನಾಡಿದ ಅವರು, ಮೀನುಗಾರಿಕೆ ಸಹಕಾರ ಸಂಘದಲ್ಲಿ. ಯುವಕ ಯುವತಿಯರು. ಉದ್ಯೋಗ ಸೃಷ್ಟಿಸಿಕೊಳ್ಳಲು. ನಮ್ಮ ಇಲಾಖೆಯಿಂದ ಬಾಡಿಗೆ ವಾಹನವನ್ನುತಾಲೂಕಿನಲ್ಲಿ ಮೊಟ್ಟ ಮೊದಲಿಗೆ ಈ ಸಂಘಕ್ಕೆ ನೀಡುತ್ತಿದ್ದೇವೆ. ಈ ವಾಹನ ಖರೀದಿಸಿದರೆ 6 ಲಕ್ಷ ರೂ. ಆಗಬಹುದು. ಈಗ 50,000 ರೂ. ಬಾಡಿಗೆಗೆ ನೀಡಿದ್ದೇವೆ. ಅಲ್ಲದೆ ಸಕಾಲದಲ್ಲಿ ಸೌಲಭ್ಯಗಳನ್ನು ಪಡೆದುಕೊಂಡು. ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಲಹೆ ನೀಡಿದರು. ಈ ವೇಳೆ ಸಂಘದ ಅಧ್ಯಕ್ಷ ಬಸವರಾಜು. ಉಪಾಧ್ಯಕ್ಷ ರಂಗಸ್ವಾಮಿ. ನಿರ್ದೇಶಕ ಸಿದ್ದಶೆಟ್ಟಿ, ಗೋವಿಂದಶೆಟ್ಟಿ, ಮಹೇಶ್, ಮಾದೇಶ ನಾಯಕ, ಮಂಜುಳಾ, ತಾಯಮ್ಮ, ಜೈರಾಮ್, ಸಿಇಒ ಸಿದ್ದರಾಜು, ಶಿವಣ್ಣ, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.