ಪೂಜಾಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳುವ 1991ರ ಕಾಯ್ದೆ ಜಾರಿ ಕೋರಿ ಎಂಐಎಂ ನಾಯಕ, ಸಂಸದ ಅಸಾದುದ್ದೀನ್‌ ಒವೈಸಿ ಸಲ್ಲಿಸಿರುವ ಮನವಿಯಲ್ಲಿ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಪೂಜಾಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳುವ ಕಾಯ್ದೆ ಜಾರಿ ಕೋರಿ ಎಂಐಎಂ ನಾಯಕ

ನವದೆಹಲಿ: ಪೂಜಾಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳುವ 1991ರ ಕಾಯ್ದೆ ಜಾರಿ ಕೋರಿ ಎಂಐಎಂ ನಾಯಕ, ಸಂಸದ ಅಸಾದುದ್ದೀನ್‌ ಒವೈಸಿ ಸಲ್ಲಿಸಿರುವ ಮನವಿಯಲ್ಲಿ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. 

ಪೂಜಾಸ್ಥಳಗಳ ಯಥಾಸ್ಥಿತಿ ಕಾಯ್ದುಕೊಳ್ಳುವ ಕಾಯ್ದೆ ಜಾರಿ ಕೋರಿ ಎಂಐಎಂ ನಾಯಕ, ಸಂಸದ ಅಸಾದುದ್ದೀನ್‌ ಒವೈಸಿ ಸುಪ್ರೀಂಗೆ ಅರ್ಜಿ ಅಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾ। ಸಂಜಯ್‌ ಕುಮಾರ್‌ ನೇತೃತ್ವದ ಪೀಠ ಬಾಕಿ ಉಳಿದಿರುವ ಹಳೆಯ ಪ್ರಕರಣಗಳ ಜೊತೆಗೆ ಫೆ.17ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿದೆ.

ಆಹಾರದಲ್ಲಿ ವಿಷ ಬೆರೆಸಿ ಸಿರಿಯಾ ಮಾಜಿ ಅಧ್ಯಕ್ಷ ಬಷರ್‌ ಹತ್ಯೆಗೆ ಯತ್ನ

ಮಾಸ್ಕೋ: ಪ್ರಸ್ತುತ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿರುವ ಸಿರಿಯಾದ ಉಚ್ಛಾಟಿತ ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಅವರನ್ನು ಹತ್ಯೆ ಮಾಡಲು ಆಹಾರದಲ್ಲಿ ವಿಷ ಬೆರಸಿದ ಘಟನೆ ಭಾನುವಾರ ನಡೆದಿದೆ. 

ಇದರಿಂದ ಬಷರ್‌ ಉಸಿರಾಡಲು ಆಗದ ಸ್ಥಿತಿಗೆ ತಲುಪಿದ್ದರು ಎಂದು ವರದಿಯೊಂದು ಹೇಳಿದೆ. ರಷ್ಯಾದ ಮಾಜಿ ಗುಪ್ತಚರ ನಡೆಸುವ ಆನ್ಲೈನ್‌ ಅಕೌಂಟ್‌ ಜನರಲ್‌ ಎಸ್‌ವಿಆರ್‌ ಈ ವರದಿ ಮಾಡಿದೆ. ವಿಷಯುಕ್ತ ಆಹಾರ ಸೇವನೆ ಬಳಿಕ ಬಷರ್‌ ತೀವ್ರ ಕೆಮ್ಮು ಮತ್ತು ಉಸಿರಾಟದ ತೊಂದರೆಗೆ ಸಿಲುಕಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಕೊಂಚ ಚೇತರಿಕೆ ಕಂಡ ಕಾರಣ ಮರಳಿ ಅವರ ಅಪಾರ್ಟ್‌ಮೆಂಟ್‌ಗೆ ಕರೆತರಲಾಯಿತು ಎಂದು ಅದು ಹೇಳಿದೆ.

ಬಿಪಿಎಸ್ಸಿ ಪರೀಕ್ಷೆ ರದ್ದತಿಗೆ ಪ್ರಶಾಂತ್‌ ಕಿಶೋರ್‌ ಆಮರಣ ಉಪವಾಸ

ಪಟನಾ: ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ರಾಜಕೀಯ ತಜ್ಞ, ಜನ ಸುರಾಜ್‌ ಪಕ್ಷದ ಸ್ಥಾಪಕ ಪ್ರಶಾಂತ್‌ ಕಿಶೋರ್‌ ವಿರೋಧ ವ್ಯಕ್ತಪಡಿಸಿದ್ದು, ಪರೀಕ್ಷೆಯನ್ನು ರದ್ದುಪಡಿಸಿ, ಮರು ಪರೀಕ್ಷೆ ನಡೆಸುವವರೆಗೆ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

 ಈ ಕುರಿತು ಗುರುವಾರ ಮಾತನಾಡಿದ ಅವರು, ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಬೇಕು. ಜೊತೆಗೆ ಹುದ್ದೆಗಳನ್ನು ದುಡ್ಡಿಗಾಗಿ ಮಾರುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಉಪವಾಸ ನಡೆಸುತ್ತಿದ್ದೇನೆ ಎಂದರು. ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಮೃತ್‌ ಲಾಲ್‌ ಅವರನ್ನು ಭೇಟಿಯಾಗಿ ಕ್ರಮ ತೆಗೆದುಕೊಳ್ಳಲು 48 ಗಂಟೆ ಗಡುವು ನೀಡಿದ್ದರು. ಇದು ವಿಫಲವಾದ ಕಾರಣ ಉಪವಾಸ ಕುಳಿತಿದ್ದಾರೆ.

ಎನ್‌ಸಿಪಿ ಒಗ್ಗೂಡುವಿಕೆಗೆ ಅಜಿತ್‌ ಪವರ್‌ ತಾಯಿ ಕರೆ: ಪೂರಕ ಪ್ರತಿಕ್ರಿಯೆ

ಮುಂಬೈ: ಸೈದ್ಧಾಂತಿಕ ಕಾರಣಗಳಿಂದಾಗಿ ಇಬ್ಭಾಗವಾಗಿದ್ದ ಎನ್‌ಸಿಪಿ ಮತ್ತೆ ಒಂದಾಗಬೇಕಿದೆ ಎಂದು ಅಜಿತ್‌ ಪವಾರ್‌ ಅವರ ತಾಯಿ ಆಶಾತಾಯಿ ಕರೆ ನೀಡಿದ್ದಾರೆ. ‘ಪವಾರ್‌ ಪರಿವಾರದೊಳಗಿನ ಎಲ್ಲಾ ಮನಸ್ತಾಪಗಳು ಕೊನೆಗೊಂಡು ಅಜಿತ್‌ ಹಾಗೂ ಶರದ್‌ ಒಂದಾಗಬೇಕು. ನನ್ನ ಪ್ರಾರ್ಥನೆ ಫಲ ಕೊಡುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಆಶಿಸಿದ್ದಾರೆ.

 ಇದಕ್ಕೆ ಪೂರಕವೆಂಬಂತೆ ಅಜಿತ್‌ ಬಣದ ನಾಯಕ ಪ್ರಫುಲ್‌ ಪಟೇಲ್‌, ‘ಶರದ್‌ ನಮಗೆ ದೇವರಿದ್ದಂತೆ. ನಮ್ಮ ನಡುವೆ ರಾಜಕೀಯ ಭಿನ್ನತೆಗಳಿದ್ದರೂ ತಂದೆಯ ಸ್ಥಾನದಲ್ಲಿರುವ ಅವರನ್ನು ಗೌರವಿಸುತ್ತೇವೆ. ಪವಾರ್‌ ಕುಟುಂಬ ಒಂದಾದರೆ ನಮಗೆ ಸಂತೋಷ’ ಎಂದರು. 2023ರಲ್ಲಿ ಅಜಿತ್‌ ಪವಾರ್‌ ಬಂಡಾಯ ಎದ್ದ ಬಳಿಕ ಎನ್‌ಸಿಪಿ ವಿಭಜನೆಯಾಗಿತ್ತು.

ಮಹಾಘಠ ಬಂಧನ ಬಾಗಿಲು ನಿತೀಶ್‌ಗೆ ಓಪನ್‌: ಲಾಲು ಯಾದವ್‌ ಮುಕ್ತ ಆಹ್ವಾನ

ಪಟನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಬಿಹಾರ ಸಿಎಂ, ಜೆಡಿಯು ನಾಯಕ ನಿತೀಶ್‌ಗೆ ಮಹಾಘಠಬಂಧನದ ಬಾಗಿಲು ತೆರೆದಿದೆ ಎಂದು ಆರ್‌ಜೆಡಿ ನಾಯಕ ಲಾಲು ಯಾದವ್‌ ಮುಕ್ತ ಆಹ್ವಾನ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಲಾಲು, ‘ಮಹಾಘಠಬಂಧನದ ಬಾಗಿಲು ನಿತೀಶ್‌ಗೆ ತೆರೆದಿದೆ. ಅವರು ಕೂಡಾ ಹಾಕಿರುವ ಕದವನ್ನು ತೆರೆದರೆ ನಾವು ಮತ್ತಷ್ಟು ಮುಂದಿನ ಹೆಜ್ಜೆ ಇಡಬಹುದು’ ಎಂದು ಹೇಳಿದ್ದಾರೆ. ಈ ನಡುವೆ ಲಾಲು ಆಹ್ವಾನದ ಬಗ್ಗೆ ಸುದ್ದಿಗಾರರು ನಿತೀಶ್‌ರನ್ನು ಪ್ರಶ್ನಿಸಿದ ವೇಳೆ, ಏನ್‌ ಹೇಳ್ತಾ ಇದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ