ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಮಿತವ್ಯಯಕ್ಕೆ ನ್ಯಾಯಾಂಗದಿಂದಲೂ ಬೆಂಬಲ ವ್ಯಕ್ತವಾಗಿದ್ದು ಸುಪ್ರೀಂಕೋರ್ಟ್‌ ಶೇ.50ರಷ್ಟು ಸಿಬ್ಬಂದಿಗೆ ವಾರಕ್ಕೆ 2 ದಿನ ವರ್ಕ್‌ಫ್ರಮ್‌ ಹೋಮ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಜೊತೆಗೆ ನ್ಯಾಯಮೂರ್ತಿಗಳ ನಡುವೆ ಕಾರ್‌ಪೂಲಿಂಗ್‌ಗೂ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

 ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಮಿತವ್ಯಯಕ್ಕೆ ನ್ಯಾಯಾಂಗದಿಂದಲೂ ಬೆಂಬಲ ವ್ಯಕ್ತವಾಗಿದ್ದು ಸುಪ್ರೀಂಕೋರ್ಟ್‌ ಶೇ.50ರಷ್ಟು ಸಿಬ್ಬಂದಿಗೆ ವಾರಕ್ಕೆ 2 ದಿನ ವರ್ಕ್‌ಫ್ರಮ್‌ ಹೋಮ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಜೊತೆಗೆ ನ್ಯಾಯಮೂರ್ತಿಗಳ ನಡುವೆ ಕಾರ್‌ಪೂಲಿಂಗ್‌ಗೂ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಸುಪ್ರೀಂಕೋರ್ಟ್‌ ಶುಕ್ರವಾರ ಸುತ್ತೋಲೆ

ಈ ಬಗ್ಗೆ ಸುಪ್ರೀಂಕೋರ್ಟ್‌ ಶುಕ್ರವಾರ ಸುತ್ತೋಲೆ ಹೊರಡಿಸಿದ್ದು, ‘ಸೋಮವಾರ, ಶುಕ್ರವಾರ ಅಥವಾ ಇತರ 2 ದಿನಗಳಲ್ಲಿ ಪಟ್ಟಿ ಮಾಡಲಾದ ಪ್ರಕರಣಗಳನ್ನು ಆನ್‌ಲೈನ್‌ ಮೂಲಕ ನಡೆಸಬೇಕು.

ಮುಂದಿನ ಆದೇಶದವರೆಗೆ ವಾರಕ್ಕೆ 2 ದಿನಗಳವರೆಗೆ ಮನೆಯಿಂದ ಕೆಲಸ

 ಮುಂದಿನ ಆದೇಶದವರೆಗೆ ಪ್ರತಿ ಶಾಖೆ ಅಥವಾ ನೋಂದಣಿ ವಿಭಾಗದಲ್ಲಿ ಶೇ.50ರಷ್ಟು ಸಿಬ್ಬಂದಿಗೆ ವಾರಕ್ಕೆ 2 ದಿನಗಳವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶವಿದೆ. ಅಗತ್ಯವಿದ್ದಲ್ಲಿ, ಯಾವುದೇ ಸಮಯದಲ್ಲಿ ಕಚೇರಿಗೆ ಹಾಜರಾಗಲು ಸಿದ್ಧರಾಗಿರಬೇಕು’ ಎಂದು ಹೇಳಿದೆ.