ಸಾರಾಂಶ
ಹಣ ಹೂಡಿಕೆ, ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಸೇರಿದಂತೆ ಹಣಕಾಸು ವಿಷಯಗಳಲ್ಲಿ ಸಲಹೆ ನೀಡುವ ಅನಧಿಕೃತ ಇನ್‌ಫ್ಲೂಯೆನ್ಸರ್‌ಗಳ ಮೇಲೆ ಕಡಿವಾಣ ಹೇರಲು ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ಸೆಬಿ ನಿರ್ಧರಿಸಿದೆ.
ಮುಂಬೈ: ಹಣ ಹೂಡಿಕೆ, ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಸೇರಿದಂತೆ ಹಣಕಾಸು ವಿಷಯಗಳಲ್ಲಿ ಸಲಹೆ ನೀಡುವ ಅನಧಿಕೃತ ಇನ್‌ಫ್ಲೂಯೆನ್ಸರ್‌ಗಳ ಮೇಲೆ ಕಡಿವಾಣ ಹೇರಲು ಷೇರು ಮಾರುಕಟ್ಟೆ ನಿಯಂತ್ರಣಾ ಸಂಸ್ಥೆಯಾದ ಸೆಬಿ ನಿರ್ಧರಿಸಿದೆ.
ಇಂಥ ಸಲಹೆಗಾರರಿಂದ ಜನರು ವಂಚನೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಇಂಥ ಸಲಹೆಗಾರರನ್ನು ನಿರ್ದಿಷ್ಟ ಕಾನೂನಿನ ಚೌಕಟ್ಟಿನೊಳಗೆ ತರಲು ಸೆಬಿ ನಿರ್ಧರಿಸಿದೆ.
ಅದರನ್ವಯ ಸೆಬಿಯಲ್ಲಿ ನೊಂದಾಯಿಸಿಕೊಳ್ಳದೇ ಹಣಕಾಸು ಸಲಹೆ ನೀಡುವ ವ್ಯಕ್ತಿಗಳ ಜೊತೆಗೆ, ಸೆಬಿಯಲ್ಲಿ ನೊಂದಾಯಿತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ರೀತಿಯ ನಂಟು ಹೊಂದಿರಬಾರದು ಎಂದು ಸೂಚಿಸಲಾಗಿದೆ.
ಸೆಬಿಯಲ್ಲಿ ನೊಂದಾಯಿತ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಇಂಥ ಫಿನ್‌ಫ್ಲೂಯೆನ್ಸರ್‌ಗಳ ನೆರವು ಪಡೆಯುತ್ತಿರುವ ಪ್ರಕರಣ ಹೆಚ್ಚಿದ ಬೆನ್ನಲ್ಲೇ ಸೆಬಿ ಈ ಕ್ರಮ ಕೈಗೊಂಡಿದೆ.