ಸಾರಾಂಶ
ಮಕ್ಕಳು ತಮ್ಮ ವಯಸ್ಸಾದ ಪೋಷಕರನ್ನುನೋಡಿಕೊಳ್ಳದಿದ್ದರೆ ಹೆತ್ತವರು ತಮ್ಮ ಮಕ್ಕಳ ಹೆಸರಿನಲ್ಲಿ ಮಾಡಿರುವ ಗಿಫ್ಟ್ ಡೀಡ್ ರದ್ದು ಮಾಡಬಹುದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಚೆನ್ನೈ: ಮಕ್ಕಳು ತಮ್ಮ ವಯಸ್ಸಾದ ಪೋಷಕರನ್ನುನೋಡಿಕೊಳ್ಳದಿದ್ದರೆ ಹೆತ್ತವರು ತಮ್ಮ ಮಕ್ಕಳ ಹೆಸರಿನಲ್ಲಿ ಮಾಡಿರುವ ಗಿಫ್ಟ್ ಡೀಡ್ ರದ್ದು ಮಾಡಬಹುದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
87 ವರ್ಷದ ಮಹಿಳೆ ನಾಗಲಕ್ಷ್ಮೀ ಎನ್ನುವವರು ಸಲ್ಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ. ನಾಗಲಕ್ಷ್ಮೀ, ತಮ್ಮ ಮಗ ಕೇಶವನ್ ಹಾಗೂ ಸೊಸೆ ಎಸ್. ಮಾಲಾ ತಮ್ಮನ್ನು ನೋಡಿಕೊಳ್ಳುತ್ತಾರೆ ಎನ್ನುವ ಭರವಸೆಯಿಂದ ಅವರ ಹೆಸರಿನಲ್ಲಿ ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಆದರೆ ಮಗ ಸೊಸೆ ಅವರನ್ನು ಸರಿಯಾಗಿ ನೋಡಿಕೊಂಡಿರಲಿಲ್ಲ, ಮಗ ಸೊಸೆ ಸತ್ತ ಬಳಿಕ ಅವಳ ಸೊಸೆಯೂ ನಿರ್ಲಕ್ಷಿಸಿದರು.ಹೀಗಾಗಿ ಗಿಫ್ಟ್ ಡೀಡ್ ರದ್ದು ಪಡಿಸುವಂತೆ ನಾಗಲಕ್ಷ್ಮೀ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆ ಸಿದ ನ್ಯಾಯಾಲಯ ಮಕ್ಕಳು ಅಥವಾ ಸಂಬಂಧಿ ನೋಡಿಕೊಳ್ಳುತ್ತಾರೆ ಎನ್ನುವ ನಂಬಿಕೆಯಿಂದ ಅವರ ಹೆಸರಿನಲ್ಲಿ ಹಿರಿಯ ಗಿಫ್ಟ್ ಡೀಡ್ ಮಾಡಿ, ಆ ಬಳಿಕ ಅವರು ನೋಡಿಕೊಳ್ಳದೇ ಇದ್ದಲ್ಲಿ ಅದನ್ನು ರದ್ದುಪಡಿಸಬಹುದು. ಗಿಫ್ಟ್ ಡೀಡ್‌ನ ದಾಖಲೆಯಲ್ಲಿ ಸ್ಪಷ್ಟವಾಗಿ ಹೇಳಿರದಿದ್ದರೂ ರದ್ದು ಪಡಿಸಬಹುದು ಎನ್ನುವ ತೀರ್ಪು ನೀಡಿದೆ.