ಸಾರಾಂಶ
ಭಾರತೀಯ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠದಲ್ಲಿ ಶುಕ್ರವಾರ ಅಂತ್ಯವಾಗಿದೆ.
ಮುಂಬೈ: ಷೇರುಪೇಟೆ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಗುರುವಾರ 1245 ಅಂಕಗಳ ಏರಿಕೆ ಕಂಡು 73745ರಲ್ಲಿ ಮುಕ್ತಾಯವಾಗಿದ್ದರೆ, ನಿಫ್ಟಿ 356 ಅಂಕ ಏರಿಕೆ ಕಂಡು 22338 ಅಂಕಗಳಲ್ಲಿ ಮುಕ್ತಾಯವಾಗಿದೆ.
ಇದು ಎರಡೂ ಸೂಚ್ಯಂಕಗಳ ಈವರೆಗಿನ ಗರಿಷ್ಠ ಮುಕ್ತಾಯದ ದಾಖಲೆಯಾಗಿದೆ.ಈ ವರ್ಷ ನಿರೀಕ್ಷೆಗೆ ಮೀರಿ ಶೇ.8.4ರಷ್ಟು ಜಿಡಿಪಿ ಬೆಳವಣಿಗೆ ಸುದ್ದಿ, ವಿದೇಶಿ ಸಾಂಸ್ಥಿಕೆ ಹೂಡಿಕೆಯಲ್ಲಿ ಗಮನಾರ್ಹ ಏರಿಕೆ, ಭಾರತದ ಉತ್ಪಾದನಾ ವಲಯದ ಉತ್ತಮ ಸಾಧನೆ, ಅಮೆರಿಕದಲ್ಲಿ ಹಣದುಬ್ಬರ ಇಳಿಕೆ ವಿಷಯಗಳು ಸೂಚ್ಯಂಕದ ಭರ್ಜರಿ ಏರಿಕೆಗೆ ಕಾರಣವಾಗಿದೆ.
ಪರಿಣಾಮ ಒಂದೇ ದಿನ ಹೂಡಿಕೆದಾರರ ಸಂಪತ್ತಿನಲ್ಲಿ 4.29 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗಿದೆ.