ಸಾರಾಂಶ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಬಡ್ಡಿದರವನ್ನು ಶೇ.0.50ರಷ್ಟು ಕಡಿತಗೊಳಿಸಿದರ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಗೆಲುವಿನ ಏಣಿ ಏರಿತು.
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಬಡ್ಡಿದರವನ್ನು ಶೇ.0.50ರಷ್ಟು ಕಡಿತಗೊಳಿಸಿದರ ಪರಿಣಾಮ ಸೆನ್ಸೆಕ್ಸ್ ಮತ್ತು ನಿಫ್ಟಿ ಗೆಲುವಿನ ಏಣಿ ಏರಿತು.
ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 746.95 ಅಂಕಗಳ ಏರಿಕೆ ಕಂಡು 82,188.99ಕ್ಕೆ ತಲುಪಿತು. ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 252.15 ಅಂಕ ನೆಗೆತದಿಂದ ಮರಳಿ 25,003.05 ಗಡಿ ದಾಟಿತು. ಸೆನ್ಸೆಕ್ಸ್‌ನಲ್ಲಿ ಬಜಾಜ್ ಫೈನಾನ್ಸ್ ಷೇರುಗಳು ಶೇ.4.93ರಷ್ಟು ಏರಿಕೆ ಕಂಡರೆ, ಆ್ಯಕ್ಸಿಸ್ ಬ್ಯಾಂಕ್‌ನ ಷೇರುಗಳು ಶೇ.3.15ರಷ್ಟು ಇಳಿಕೆಯಲ್ಲಿ ಮುಕ್ತಾಯವಾಯಿತು.
ಇದನ್ನು ಹೊರತುಪಡಿಸಿ, ಮಾರುತಿ, ಬಜಾಜ್ ಫಿನ್‌ಸರ್ವ್, ಎಟರ್ನಲ್‌ಗಳು ಲಾಭದಲ್ಲಿ, ಭಾರತಿ ಏರ್ಟೆಲ್, ಸನ್‌ಫಾರ್ಮಾ ನಷ್ಟದಲ್ಲಿ ಮುಕ್ತಾಯವಾಯಿತು.