ಸಾರಾಂಶ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 145 ಅಂಕಗಳ ಏರಿಕೆ ಕಂಡು 80664 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿಕೂಡಾ 84 ಅಂಕ ಏರಿಕೆ ಕಂಡು 24586 ಅಂಕಗಳಲ್ಲಿ ಅಂತ್ಯಗೊಂಡಿದೆ.
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ 145 ಅಂಕಗಳ ಏರಿಕೆ ಕಂಡು 80664 ಅಂಕಗಳಲ್ಲಿ ಮುಕ್ತಾಯವಾಗಿದೆ. ಇದೇ ವೇಳೆ ನಿಫ್ಟಿಕೂಡಾ 84 ಅಂಕ ಏರಿಕೆ ಕಂಡು 24586 ಅಂಕಗಳಲ್ಲಿ ಅಂತ್ಯಗೊಂಡಿದೆ.
ಈ ಎರಡೂ ಸೂಚ್ಯಂಕಗಳ ಮಟ್ಟ ಸಾರ್ವಕಾಲಿಕ ಗರಿಷ್ಠವಾಗಿದೆ. ಬ್ಯಾಂಕಿಂಗ್, ಆಟೋಮೊಬೈಲ್, ಸಿಮೆಂಟ್, ಐಟಿ ವಲಯದ ಕಂಪನಿಗಳ ಷೇರುಗಳು ಸೋಮವಾರ ಉತ್ತಮ ಏರಿಕೆ ಕಂಡವು. ನೋಂದಾಯಿತ ಕಂಪನಿಗಳ ಪೈಕಿ 2035 ಕಂಪನಿಗಳ ಷೇರು ಸೋಮವಾರ ಏರಿದರೆ, 2005 ಕಂಪನಿಗಳ ಷೇರು ಮೌಲ್ಯ ಇಳಿಯಿತು. 128 ಕಂಪನಿ ಷೇರು ಯಥಾಸ್ಥಿತಿಯಲ್ಲಿತ್ತು.