ಸಾರಾಂಶ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 732 ಅಂಕಗಳ ಭಾರೀ ಕುಸಿತ ಕಂಡು 73878 ಅಂಕಗಳಲ್ಲಿ ಮುಕ್ತಾಯವಾಗಿದೆ.
ಮುಂಬೈ: ಬಾಂಬೆ ಷೇರು ಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 732 ಅಂಕಗಳ ಭಾರೀ ಕುಸಿತ ಕಂಡು 73878 ಅಂಕಗಳಲ್ಲಿ ಮುಕ್ತಾಯವಾಗಿದೆ.
ಪರಿಣಾಮ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 2.25 ಲಕ್ಷ ಕೋಟಿ ರು.ನಷ್ಟು ಕರಗಿಹೋಗಿದೆ. ಆರಂಭದಲ್ಲಿ ಸೂಚ್ಯಂಕ ಏರಿಕೆ ಕಂಡಿತ್ತಾದರೂ ಹೂಡಿಕೆದಾರರು ಕಳೆದ ಕೆಲ ದಿನಗಳ ಏರಿಕೆಯ ಲಾಭ ಪಡೆಯಲು ಮುಂದಾದ ಕಾರಣ, ಜಾಗತಿಕ ಷೇರುಪೇಟೆಯ ಪ್ರಭಾವ ಮತ್ತು ಹೊಸ ಸರ್ಕಾರ ರಚನೆಯಾದ ಬಳಿಕ ಕೇಂದ್ರ ತೆರಿಗೆ ನೀತಿಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದೆ ಎಂಬ ವದಂತಿಗಳು ಒಂದು ಹಂತದಲ್ಲಿ ಸೂಚ್ಯಂಕ 1627 ಅಂಕಗಳವರೆಗೆ ಕುಸಿತ ಕಂಡಿತ್ತು. ಕೊನೆಗೆ ಸೂಚ್ಯಂಕ ಅಲ್ಪ ಚೇತರಿಕೆ ಕಂಡಿತು.